ಐಷಾರಾಮಿ ಪಲ್ಲಕ್ಕಿ ವೈಶಿಷ್ಟ್ಯಗಳು

Advertisement

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ಚಾಲನೆ ನೀಡಿದ ಬಹುನಿರೀಕ್ಷಿತ ನಾನ್‌ ಎಸಿ ‘ಪಲ್ಲಕ್ಕಿ’ ಬಸ್‌ಗಳ ವೈಶಿಷ್ಟ್ಯ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

🔹‘ಪಲ್ಲಕ್ಕಿ’ – ಹವಾನಿಯಂತ್ರಣರಹಿತ ಸ್ಲೀಪರ್ ವಾಹನಗಳ ವೈಶಿಷ್ಟ್ಯಗಳು:

  • ಬಿಎಸ್-6 ತಂತ್ರಜ್ಞಾನ ಮಾದರಿಯ 197 ಹೆಚ್‌ಪಿ ಇಂಜಿನ್.
  • ಸುಸಜ್ಜಿತವಾಗಿ ವಿನ್ಯಾಸಗೊಳಿಸಿದ 30 ಸ್ಲೀಪರ್ ಬರ್ತ್ ಸೀಟುಗಳು [FDSS Fire Detection & Suppression System].
  • ಪ್ರತಿ ಸೀಟಿಗೆ ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ಗಳ ಚಾರ್ಜಿಂಗ್ ಸೌಲಭ್ಯ ಹಾಗೂ ಮೊಬೈಲ್ ಸ್ಯಾಂಡ್ ವ್ಯವಸ್ಥೆ LED ಪ್ರದರ್ಶಿತ ಬಸ್ ಬರ್ತ್‌ ಸೀಟುಗಳ ಸಂಖ್ಯೆ.
  • ಓದಲು ಉತ್ತಮ ಬೆಳಕಿನ LED ದೀಪಗಳ ಅಳವಡಿಕೆ, ಆಡಿಯೋ ಸ್ಪೀಕರ್‌ಗಳ ಅಳವಡಿಕೆ ಹಾಗೂ ಸಾರ್ವಜನಿಕ ಮಾಹಿತಿ. ಡಿಜಿಟಲ್ ಗಡಿಯಾರ, LED ನೆಲಹಾಸು ಪ್ರತಿ ಪ್ರಯಾಣಿಕರಿಗೆ ಚಪ್ಪಲಿ ಇಡಲು ಸ್ಥಳಾವಕಾಶ ವ್ಯವಸ್ಥೆ. ಪ್ರಯಾಣಿಕರಿಗೆ ತಲೆದಿಂಬು ವ್ಯವಸ್ಥೆ. ಚಾಲಕರಿಗೆ ಸಹಕಾರಿಯಾಗುವಂತ ಹಿನ್ನೋಟ ಕ್ಯಾಮರಾ ಸೌಲಭ್ಯ.

🔹 ‘ಕರ್ನಾಟಕ ಸಾರಿಗೆ- ವಾಹನಗಳ ವೈಶಿಷ್ಟ್ಯಗಳು:

  • ಬಿಎಸ್-6 ತಂತ್ರಜ್ಞಾನ ಮಾದರಿಯ 197 ಹೆಚ್‌ಪಿ ಇಂಜಿನ್.
  • ಸುಸಜ್ಜಿತವಾಗಿ ವಿನ್ಯಾಸಗೊಳಿಸಿದ 50+1 ಆಸನಗಳು.