ಬೆಂಗಳೂರು: ಮುತ್ತಯ್ಯ ಮುರಳೀಧರನ್ ಅವರ ಕ್ರಿಕೆಟ್ ಬದುಕಿನ ಹಲವು ರೋಚಕ ಅಂಶಗಳಿಂದ ಕೂಡಿದ ʻ800ʼ ಸಿನಿಮಾ ಶುಕ್ರವಾರ ಬಿಡುಗಡೆ ಆಗಿದ್ದು, ಇಂದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ಆಗಿದೆ. #MustWatch800Movie ಎಂಬ ಹ್ಯಾಸ್ಟ್ಯಾಗ್ಬಳಸಿ ಪೋಸ್ಟ್ಮಾಡಿ 800 ಸಿನಿಮಾಗಳಿಗೆ ಪ್ರೇಕ್ಷಕರು ಬಾರಿ ಬೆಂಬಲವನ್ನು ನೀಡಿದ್ದಾರೆ. ವಿಶ್ವ ಕಂಡ ಅಪ್ರತಿಮ ಸ್ಪಿನ್ನರ್ಗಳಲ್ಲಿ ಮುತ್ತಯ್ಯ ಮುರಳೀಧರನ್ ಕೂಡ ಒಬ್ಬರು. ಅವರು ವೃತ್ತಿ ಜೀವನದಲ್ಲಿ 800 ವಿಕೆಟ್ ಪಡೆದಿದ್ದಾರೆ. ಈ ಸಾಧನೆ ಮಾಡಿರುವ ಏಕೈಕ ಬೌಲರ್ ಎನ್ನುವ ಖ್ಯಾತಿ ಮುತ್ತಯ್ಯ ಮುರಳೀಧರನ್ಗೆ ಇದೆ. ಈ ಕಾರಣದಿಂದ ಅವರ ಬಯೋಪಿಕ್ಗೆ ‘800’ ಎಂಬ ಶೀರ್ಷಿಕೆ ಇಡಲಾಗಿದೆ.