ಮೋದಿ ವಿರಚಿತ ಹಾಡು ಫುಲ್‌ ಟ್ರೆಂಡಿಂಗ್‌!

Advertisement

ನವರಾತ್ರಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರಚಿತ ಹಾಡು ಫುಲ್‌ ಟ್ರೆಂಡಿಂಗ್‌ ಸೃಷ್ಟಿಸಿದೆ. ಗರ್ಬಾ ಜಾನಪದ ನೃತ್ಯಕ್ಕೆ ಅವರು ಬರೆದ ಗೀತೆ, ಅವರೊಬ್ಬ ಕವಿ ಕೂಡಾ ಹೌದು ಎಂಬುದನ್ನು ಸಾಬೀತುಪಡಿಸಿದೆ.
ಸದ್ಯ ಗರ್ಬಾ ಹಾಡಿನ ವಿಡಿಯೋ ರಿಲೀಸ್‌ ಆಗಿದ್ದು, ಭಾರಿ ವೈರಲ್‌ ಆಗಿದೆ. ಅಷ್ಟೇ ಅಲ್ಲ, ಲಕ್ಷಾಂತರ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಾಲಿವುಡ್‌ ನಟಿ ಕಂಗನಾ ರಣಾವತ್‌ ಅವರು ಕೂಡ ಹಾಡನ್ನು ಮೆಚ್ಚಿದ್ದಾರೆ. ಸಾಹಿತ್ಯಕ್ಕೆ ತಕ್ಕಂತೆ ಇರುವ ನೃತ್ಯವೂ ಗಮನ ಸೆಳೆದಿದೆ.
ಈ ಕುರಿತು ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, ನಾನು ವರ್ಷಗಳ ಹಿಂದೆ ಬರೆದ ಗರ್ಬಾದ ಈ ಸುಂದರ ನಿರೂಪಣೆ ಇಂದು ಅನೇಕ ನೆನಪುಗಳನ್ನು ತರುತ್ತದೆ. ನನಗೆ ಹಲವು ವರ್ಷಗಳಿಂದ ಬರೆಯಲು ಆಗಿರಲಿಲ್ಲ. ಆದರೆ, ಕಳೆದ ಕೆಲವು ದಿನಗಳಿಂದ ನಾನು ಹೊಸ ಗರ್ಬಾವನ್ನು ಬರೆಯುವಲ್ಲಿ ಯಶಸ್ವಿಯಾಗಿದ್ದೇನೆ. ಅದನ್ನು ನಾನು ನವರಾತ್ರಿ ಸಂದರ್ಭದಲ್ಲಿ ಹಂಚಿಕೊಳ್ಳುತ್ತೇನೆ ಎಂದಿದ್ದಾರೆ.