ಶ್ರೀರಂಗಪಟ್ಟಣ: ಭಗವಾನ್ ಅವಹೇಳನಾಕಾರಿ ಹೇಳಿಕೆಗೆ ತೀವ್ರ ಖಂಡನೆ

Advertisement

ಶ್ರೀರಂಗಪಟ್ಟಣ: ಒಕ್ಕಲಿಗ ಸಮುದಾಯದ ವಿರುದ್ಧ ಬುದ್ಧಿಜೀವಿ ಭಗವಾನ್ ಅವಹೇಳನಾಕಾರಿ ಹೇಳಿಕೆಯನ್ನು ಖಂಡಿಸಿ ಶ್ರೀರಂಗಪಟ್ಟಣದಲ್ಲಿ ಒಕ್ಕಲಿಗ ಮುಖಂಡರು ಅವರ ಭಾವಚಿತ್ರಕ್ಕೆ ಚಪ್ಪಲಿ‌ಸೇವೆ ನಡೆಸಿದರು.
ಪಟ್ಟಣದ ಕುವೆಂಪು ವೃತ್ತದ ಬಳಿಯ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಒಕ್ಕಲಿಗ ಮುಖಂಡರು ಭಗವಾನ್‌ರವರ ಫೋಟೋಗೆ ಚಪ್ಪಲಿ ಸೇವೆಯ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಭಗವಾನ್ ಎಂಬ ಅವಿವೇಕಿ ಒಕ್ಕಲಿಗರ ಸಂಸ್ಕಾರದ ಬಗ್ಗೆ ಕೇವಲವಾಗಿ ಮಾತನಾಡಿದ ಹುಚ್ಚು ನಾಯಿ. ಮತಿಹೀನ ಭಗವಾನ್ ವಿರುದ್ದ ಅವರ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡುವ ಮುಖಾಂತರ ವಿರೋಧ ವ್ಯಕ್ತಪಡಿಸುತ್ತಿರುವುದಾಗಿ ಆಕ್ರೋಷ ವ್ಯಕ್ತವಾಯಿತು.


ಒಕ್ಕಲಿಗ ಮುಖಂಡರುಗಳಾದ ಪೈಲ್ವಾನ್ ಶಂಕ್ರಣ್ಣ. ಪರಮೇಶ್, ನಂದೀಶ್, ಸಂಜು. ಮರ್ಲಿಂಗಣ್ಣ, ಸುಧಾಕರ್, ಸುನಿಲ್, ರಮೇಶ್, ರಾಜು, ಮತ್ತು ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟ ಪದಾಧಿಕಾರಿಗಳಾದ ದೇವರಾಜು ಗೌಡಳ್ಳಿ, ಸ್ವಾಮೇಗೌಡ ಎಲ್ಐಸಿ, ಸುರೇಶ್, ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಗಂಜಾಂ, ಪ್ರಧಾನ ಕಾರ್ಯದರ್ಶಿ ಗುರುಮೂರ್ತಿ ಮರಳಾಗಾಲ, ಖಜಾಂಚಿ ಶಿವ ಸ್ವಾಮಿ, ಕಾರ್ಯದರ್ಶಿ ಗಂಜಾಂ ಯೋಗಣ್ಣ ಮತ್ತಿತರರು ಭಾಗವಹಿಸಿದ್ದರು.