ಸಿಲಿಕಾನ್ ಸಿಟಿಯಲ್ಲಿ ಕ್ರಿಕೆಟ್: ಮೆಟ್ರೋದಲ್ಲಿ ವಿಶೇಷ ಟಿಕೆಟ್

Advertisement

ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುವ ವಿಶ್ವಕಪ್ ಕ್ರಿಕೆಟ್ ಎಲ್ಲಾ ಪಂದ್ಯಾವಳಿಯ  ದಿನ ಮೆಟ್ರೋ ರೈಲು ಸೇವೆಯ ಅವಧಿಯನ್ನು ವಿಸ್ತರಣೆ ಮಾಡಲಾಗಿದ್ದು, ವಿಶೇಷ ದರದ ರಿಯಾಯಿತಿಯನ್ನೂ ಸಹ ಘೋಷಿಸಲಾಗಿದೆ. ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಕ್ರಿಕೆಟ್‌ಗೆ ಬರುವ ಮತ್ತು ಹೋಗುವ ಪ್ರಯಾಣಕ್ಕೆ 50 ರೂಪಾಯಿ ಟಿಕೆಟ್ ನಿಗದಿಪಡಿಸಿ ಬಿಎಂಆರ್​ಸಿಎಲ್ ಪ್ರಕಟಣೆ ಹೊರಡಿಸಿದೆ. ಕ್ರಿಕೆಟ್ ಪಂದ್ಯದ ದಿನದಂದು ಬೆಳಗ್ಗೆ 7 ಗಂಟೆಗೆ ಪೇಪರ್ ಟಿಕೆಟ್​ ಲಭ್ಯವಿರಲಿದೆ. ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಕ್ಟೋಬರ್ 20ರಂದು ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ, ಅಕ್ಟೋಬರ್ 26ರಂದು ಇಂಗ್ಲೆಂಡ್ ಹಾಗು ಶ್ರೀಲಂಕಾ, ನವೆಂಬರ್ 4ರಂದು ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ, ನವೆಂಬರ್ 9ರಂದು ನ್ಯೂಜಿಲೆಂಡ್ ಮತ್ತು ಶ್ರೀಲಂಕಾ, ನವೆಂಬರ್ 12ರಂದು ಭಾರತ ಹಾಗೂ ನೆದರ್ಲೆಂಡ್​​ ಮಧ್ಯೆ ವಿಶ್ವಕಪ್ ಪಂದ್ಯಾವಳಿಗಳು ನಡೆಯಲಿವೆ. ಬೆಂಗಳೂರಿನ ಎಲ್ಲ ಮೆಟ್ರೋ ನಿಲ್ದಾಣಗಳಲ್ಲೂ ಪೇಪರ್ ಟಿಕೆಟ್​ ಲಭ್ಯವಿರಲಿದೆ. ಪೇಪರ್ ಕಾರ್ಡ್​ಗಳ ಜತೆಗೆ ಸ್ಮಾರ್ಟ್ ಕಾರ್ಡ್ ಹಾಗೂ ಎನ್​ಸಿಎಂಸಿ ವ್ಯವಸ್ಥೆಯನ್ನು ಕೂಡ ಪ್ರಯಾಣಿಕರು ಪಡೆದುಕೊಳ್ಳಬಹುದೆಂದು ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ.