ರ‍್ಯಾಪಿಡ್​ ರೈಲಿನಲ್ಲಿ ಮೋದಿ

Advertisement

ನವದೆಹಲಿ: ದೇಶದ ಮೊದಲ ಇಂಟರ್ಸಿಟಿ ರ‍್ಯಾಪಿಡ್-​ಎಕ್ಸ್ ಪ್ರೆಸ್​​ ರೈಲಿಗೆ ಪ್ರಧಾನಿ ನರೇಂದ್ರಮೋದಿ ಅವರು ಚಾಲನೆ ನೀಡಿದರು.
ಉತ್ತರ ಪ್ರದೇಶದ ಸಾಹಿಬಾಬಾದ್ ರಾಪಿಡ್‍ಎಕ್ಸ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದರು. ಈ ರೈಲು ಸಾಹಿಬಾಬಾದ್, ಗಾಜಿಯಾಬಾದ್ ಗುಲ್ಧರ್, ದುಹೈ ಮತ್ತು ದುಹೈ ಡಿಫೋ ಸೇರಿದಂತೆ 5 ನಿಲ್ದಾಣಗಳಲ್ಲಿ ಕಾರ್ಯ ನಿರ್ವಹಿಸಲಿವೆ.
ಪ್ರತಿ ಗಂಟೆಗೆ 180 ಕಿಲೋಮೀಟರ್ ವೇಗದೊಂದಿಗೆ, ಪ್ರತಿ 15 ನಿಮಿಷಗಳಿಗೊಮ್ಮೆ ಅಂತರನಗರ ಪ್ರಯಾಣಕ್ಕಾಗಿ ಹೈ-ಸ್ಪೀಡ್ ರೈಲುಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ, ಇದರಡಿ ರೈಲು ಅವಶ್ಯಕತೆಗೆ ಅನುಗುಣವಾಗಿ ಪ್ರತಿ 5 ನಿಮಿಷಗಳ ಪುನರಾರ್ತನೆ ಆಗುತ್ತಿರುತ್ತದೆ.