ನ್ಯಾಯಾಲಯಕ್ಕೆ ಬಂದ ಬಸ್‌

Advertisement

ಕುಷ್ಟಗಿ: ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಪರಿಹಾರ ನೀಡದೆ, ನ್ಯಾಯಾಲಯದ ಆದೇಶ ಧಿಕ್ಕರಿಸಿದ್ದ ಹಾವೇರಿ ವಿಭಾಗದ ಬ್ಯಾಡಗಿ ಡಿಪೋ ಎನ್.ಡಬ್ಲ್ಯು.ಕೆ.ಆರ್.ಟಿ.ಸಿ. ಸಂಸ್ಥೆಯ ಬಸ್ ಒಂದನ್ನು ಇಲ್ಲಿನ ನ್ಯಾಯಾಲಯ ಜಪ್ತಿ ಮಾಡಿದ ಘಟನೆ ನಡೆದಿದೆ. ಒಂದೇ ಪ್ರಕರಣಕ್ಕೆ ನಾಲ್ಕನೇ ಬಾರಿ ನ್ಯಾಯಾಲಯವು ಜಪ್ತಿ ವಾರಂಟ್ ಜಾರಿ ಮಾಡಿದರು ಸಹ ಹಣ ತುಂಬದೆ ಇರುವದರಿಂದ ಸಾರಿಗೆ ಇಲಾಖೆಯ ಬಸ್ ಜಪ್ತಿ ಪಡೆದಿದೆ.
ಈ ಪ್ರಕರಣದ ಕುರಿತು ವಕೀಲರ ಸಂಘದ ಅಧ್ಯಕ್ಷ ವಿಜಯ ಮಹಾಂತೇಶ ಕುಷ್ಟಗಿ ಮಾತನಾಡಿ 2017 ರಲ್ಲಿ ತಾಲೂಕಿನ ಹನಮಸಾಗರ- ಇಲ್ಲಕಲ್ ರಸ್ತೆಯ ಮಾರ್ಗದಲ್ಲಿ ಬಸ್ ಅಪಘಾತದಲ್ಲಿ ಹನಮಸಾಗರ ಗ್ರಾಮದ ನಿವಾಸಿ ದಾವಲಂಬಿ ಹೊಸಮನಿ ನಿಧನರಾಗಿದ್ದರು. ಈ ಕುರಿತು ಕುಷ್ಟಗಿ ನ್ಯಾಯಾಲಯದಲ್ಲಿ ಪರಿಹಾರ ಕೋರಿ ಪ್ರಕರಣ ಸಹ ದಾಖಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಸಾರಿಗೆ ಸಂಸ್ಥೆಗೆ 18.81 ಲಕ್ಷ ರೂ ಮೃತನ ಕುಟುಂಬಕ್ಕೆ ನೀಡುವಂತೆ ಹಿಂದಿನ ಹಿರಿಯ ದಿವಾಣಿ ನ್ಯಾಯಾಧೀಶರಾದ ಹೊನ್ಮಸ್ವಾಮಿ ಆದೇಶ ಮಾಡಿದರು.
ಆದರೆ ನ್ಯಾಯಾಲಯ ನೀಡಿದ ಆದೇಶದ ಬಗ್ಗೆ ತಲೆ ಕೆಡಿಸಿಕೊಳ್ಳದ ಸಾರಿಗೆ ಸಂಸ್ಥೆ ಇನ್ನೂ ನೊಂದವರಿಗೆ ಪರಿಹಾರ ನೀಡುವಂತೆ ಹಿರಿಯ ದಿವಾಣಿ ನ್ಯಾಯಾಧೀಶರಾದ ಸರಸ್ವತಿ ದೇವಿ ಆದೇಶಿಸಿದರು ಸಾಕಷ್ಟು ಬಾರಿ ಆದೇಶ ಮಾಡಿದರು.ಆದರೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ತಲೆ ಕೆಡಿಸಿಕೊಳ್ಳದೆ ಇರುವುದರಿಂದ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಶೇ.೬ ರಷ್ಟು ಬಡ್ಡಿ 2,628,25 ರೂ ಸೇರಿದಂತೆ ಒಟ್ಟು 21,48,825 ರೂ ಪರಿಹಾರ ನೀಡದೆ ಇರುವುದರಿಂದ ನ್ಯಾಯಾಲಯದ ಆದೇಶದಂತೆ ಅಫಜಲಪುರ-ಬ್ಯಾಡಗಿ ಬಸ್‌ ಹನಮಸಾಗರದ ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆ ನ್ಯಾಯಾಲಯದ ಸಿಬ್ಬಂದಿಗಳು ಬಸ್‌ನ್ನು ಜಪ್ತಿ ಮಾಡಿಕೊಂಡು ಕುಷ್ಟಗಿಯ ನ್ಯಾಯಾಲಯಕ್ಕೆ ತಂದು ಒಪ್ಪಿಸಿದ್ದಾರೆ.
ನೊಂದವರ ಪರವಾಗಿ ವಕೀಲರಾದ ವಿ.ಕೆ.ಕುಷ್ಟಗಿ,ಆರ್.ಎಸ್ ಗುರುಮಠ,ಎಂ.ಬಿ.ಬಾದರದಿನ್ನಿ,ಲಿಂಗರಾಜ ಅಗಸಿಮುಂದಿನ, ಆರ್.ಎಸ್.ಮೇಟಿ. ಆರ್.ಎಸ್ ಕಂದಗಲ್ ವಾದ ಮಂಡಿಸಿದ್ದರು. ನ್ಯಾಯಾಲಯದ ಸಿಬ್ಬಂದಿಗಳಾದ ರಾಜೇಸಾಬ್ ಬೇಲಿಪ್‌,ರವಿ ಕುಮಾರ್ ಹಾಗೂ ಮಂಜುನಾಥ ಜಾರಿಕಾರರು ಜಪ್ತಿ ಮಾಡಿ ಮಾನ್ಯ ನ್ಯಾಯಾಲಯದ ಸುಪರ್ದಿಗೆ ಒಪ್ಪಿಸುತ್ತಾರೆ.
ಬಸ್ ಜಪ್ತಿ ವೇಳೆಯಲ್ಲಿ ನ್ಯಾಯಾಲಯದ ಹಿರಿಯ ಶಿರೇಸ್ತಾದಾರ ಡಿ. ಗೋವಿಂದರಾಜು, ಲೆಕ್ಕ ಶೀರೆಸ್ತಾರ ಆದಪ್ಪ, ಪ್ರೋಸಸ್ ನಾಜರ್, ನೀಲಪ್ಪ,ರವಿಕುಮಾರ್, ಮಂಜುನಾಥ ಹಾಗೂ ನ್ಯಾಯಾಲಯದ ಸಿಬ್ಬಂದಿ ಹಾಜರಿದ್ದರು.