ನಾನು ಬೆಂಜ್ ಕಾರು, ಹೆಲಿಕ್ಯಾಪ್ಟರ್ ಸ್ವಾಮಿ ಅಲ್ಲ

ಬಸವಜಯ ಮೃತ್ಯುಂಜಯ ಸ್ವಾಮೀಜಿ
Advertisement

ಶಿಗ್ಗಾವಿ: ಸಮಾಜದ ಋಣ ನಿಮ್ಮ ಮೇಲಿದೆ ಮೀಸಲಾತಿ ಘೋಷಣೆ ಮಾಡಿ, ಮೀಸಲಾತಿ ಕೊಡಲು ಆಗೋದಿಲ್ಲ ಅಂದರೆ ಅದನ್ನಾದರೂ ಅಧಿವೇಶನದಲ್ಲಿ ಘೋಷಣೆ ಮಾಡಿ ಪಂಚಮಸಾಲಿಗಳು ಒಮ್ಮೆ ಬೀದಿಗಿಳಿದರೆ ಗುರಿ ಮುಟ್ಟೋವರೆಗೂ ಬಿಡೋದಿಲ್ಲ ನಮಗಿರೋದು ಒಂದೇ ನಾಲಿಗೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಸಿಎಂ ಬಸವರಾಜ ಬೊಮ್ಮಾಯಿಯವರ ನಿವಾಸದ ಮುಂದಿನ ರಸ್ತೆಯಲ್ಲಿ ನಡಿತಿರೋ ಸತ್ಯಾಗ್ರಹದಲ್ಲಿ ಮಾತನಾಡಿ, ನಾನು ಬೆಂಜ್ ಕಾರು, ಹೆಲಿಕ್ಯಾಪ್ಟರ್ ಸ್ವಾಮಿ ಅಲ್ಲ ಅಂತಾ ಮಾತು ಆರಂಭಿಸಿದ ಅವರು ಸೋಮಣ್ಣ ಬೇವಿನಮರದ, ಮಂಜುನಾಥ ಕುನ್ನೂರರು ತ್ಯಾಗ ಮಾಡಿ ಬೊಮ್ಮಾಯಿ ಅವರಿಗೆ ಅಧಿಕಾರ ಕೊಟ್ಟರು ಬೊಮ್ಮಾಯಿಯವರು ಅಧಿಕಾರಕ್ಕೆ ಬಂದಾಗ ನಮಗೆ ಖುಷಿಯಾಯಿತು. ಬೊಮ್ಮಾಯಿಯವರು ಸಿಎಂ ಆದ್ಮೇಲೆ ಕರೆದು ಮೀಸಲಾತಿ ಕೊಡೋಕೆ ಮೂರು ತಿಂಗಳು ಸಮಯ ಕೇಳಿದರು. ಸಿಎಂ ಬಸವರಾಜ ಬೊಮ್ಮಾಯಿಯವರು ನಾಲ್ಕು ಬಾರಿ ಮಾತು ಕೊಟ್ಟು ತಪ್ಪಿದರು. ನಾಲ್ಕನೆ ಬಾರಿ ಮಾತು ತಪ್ಪಿದರೆ ಸಿಎಂ ಮನೆ ಮುಂದೆ ಸತ್ಯಾಗ್ರಹ ಮಾಡುತ್ತೇವೆ ಅಂತಾ ಹೇಳೆದ್ದೇವು ಅದೇ ರೀತಿ ಸಿಎಂ ಅವರು ಕೊಟ್ಟ ಮಾತು ತಪ್ಪಿರೋ ಕಾರಣಕ್ಕೆ ಸತ್ಯಾಗ್ರಹ ಮಾಡುತ್ತಿದ್ದೇವೆ ಮೀಸಲಾತಿ ಹೋರಾಟ ಈಗಾಗಲೇ ಬಹುದೊಡ್ಡ ಯಶಸ್ಸು ಕಂಡಿದೆ ಎಂದರು.