ಹಂಚಿ ತಿನ್ನದಿರೆ ಅಚ್ಯುತನೊಪ್ಪ…

ಗುರುಬೋಧೆ
PRATHAPPHOTOS.COM
Advertisement

ತಾನು ತಿನ್ನುವಾಗ ಮತ್ತೊಬ್ಬರಿಗೆ ಕೊಟ್ಟು ಉಣ್ಣಬೇಕು ಎಂಬುದು ಧರ್ಮ. ಅದು ಭಾರತೀಯರ ಸಂಸ್ಕೃತಿಯ ನಡೆ ಕೂಡ. ಹೀಗಾಗಿ ಏನೂ ಸಿಗದೇ ಇದ್ದರೂ ಕೂಡ ದೇವರ ಹೆಸರಿನಲ್ಲಿ ಹಸಿವಿದ್ದರೆ ಬೇಡಿ ತಿನ್ನು. ಬೇಡಿ ಬಂದಿದರಲ್ಲಿಯೇ ಮತ್ತೊಬ್ಬರಿಗೆ ಹಂಚಿಕೊಂಡು ತಿನ್ನು ಎಂದು ಹೇಳುವಲ್ಲಿ ದಾಸರು ಒಪ್ಪತ್ತು ಭಿಕ್ಷೆಯ ಬೇಡು.. ಒಬ್ಬರಿಗೆ ಒಂದಿಷ್ಟು ನೀಡು ಅಪ್ಪನಾದ ಅಚ್ಯುತನಾ ಪಾಡು ಆನಂದದಿಂದ ಲೋಲಾಡು... ಹಾಗೇ ಹಂಚಿಕೊಂಡು ತಿನ್ನದೇ ಇದ್ದರೆ ಏನಾದೀತು ಎಂಬುದನ್ನು ಸೊಗಸಾಗಿ ವಿವರಿಸುತ್ತಾರೆ. ಸಾಮಾನ್ಯವಾಗಿ ಉದರರೋಗದಿಂದ ಬಳಲುವವರು ಏನು ಪಾಪಗಳನ್ನು ಮಾಡಿರಬಹುದು ಅಂತ ಕೇಳಿದ್ದಕ್ಕೆ ರುದ್ರದೇವರು ಯಾರು "ಆತ್ಮಾರ್ಥಮೇವ ಚಾಹಾರಮ್ ಭುಂಜತೇ ನಿರಪೇಕ್ಷಕಾಃ" ವ್ಯಕ್ತಿ ದೇವರು ಕೊಟ್ಟ ಭಾಗ್ಯವನ್ನು ಅನುಭವಿಸುವಾಗ ತನ್ನ ಜೊತೆ ನಾಲ್ಕು ಜನರಿಗೆ ಹಂಚಿ ತಾನೂ ಸ್ವೀಕರಿಸಿದರೆ ಭಗವಂತ ಸಂತಸ ಪಡುತ್ತಾನಂತೆ ಭೋಜನ ಮಾಡುವುದು ಅಂತರ್ಯಾಮಿಯಾದ ಭಗವಂತನ ಪೂಜೆ ಎಂಬ ಚಿಂತನೆ ಇರಬೇಕು" ಇಲ್ಲವಾದಲ್ಲಿ ಉದರ ವ್ಯಾಧಿ. ತಾನು ಅವಶ್ಯವಾಗಿ ಭಗವಂತು ಕೊಟ್ಟ ಸೌಭಾಗ್ಯವನ್ನು ಅನುಭವಿಸಬೇಕು.ಸಡಗರದಲ್ಲಿಪ್ಪುದೇ ಶ್ರೀಶನಾಜ್ಞೆ …’ಎಂದು ವಿಜಯದಾಸರು ಹೇಳಿದಂತೆ ದೇವರು ಐಶ್ವರ್ಯ ಕೊಟ್ಟಾಗ ಬೇಕಾದಷ್ಟು ಭಕ್ಷ್ಯ ಭೋಜ್ಯಗಳನ್ನು ಮಾಡಿಕೊಂಡರೆ ತಪ್ಪಿಲ್ಲ, ವಿಹಿತವಾದ ಅನಿಷಿದ್ಧವಾದ ಯೋಗ್ಯವಾದ ಆಹಾರವನ್ನು ಸ್ವೀಕಾರ ಮಾಡಬಹುದು ಆದರೆ ತಾನು ಸ್ವೀಕಾರ ಮಾಡುವಾಗ ತನ್ನಂತೆ ಹಸಿದವರಿಗೆ, ಯಾರಿಗೆ ಕಷ್ಟ ಇದೆ ಅವರಿಗೆ ಕೊಟ್ಟು ತಾನು ಸ್ವೀಕರಿಸಿದರೆ ಭಗವಂತನಿಗೆ ಸಂತೋಷವಾಗುತ್ತದೆ.
`ತಸ್ಯ ಪ್ರಾಣ್ಯುಪಕಾರೇಣ ಸಂತುಷ್ಟೋ ಭವತೀಶ್ವರಃ ‘
ಶ್ರೀಮದಾಚಾರ್ಯರು ಭಾಗವತ ತಾತ್ಪರ್ಯದಲ್ಲಿ ತಿಳಿಸುತ್ತಾರೆ, ಗೀತಾ ತಾತ್ಪರ್ಯದಲ್ಲಿಯೂ ಹೇಳುತ್ತಾರೆ. ಪ್ರಾಣಿಗಳಿಗೆ ಜೀವರಾಶಿಗಳಿಗೆ ಉಪಕಾರಮಾಡಿದರೆ ಅಂತರ್ಯಾಮಿಯಾದ ಭಗವಂತ ಸಂತುಷ್ಟನಾಗುತ್ತಾನೆ ಎನ್ನುತ್ತಾರೆ. ಈ ಚಿಂತನದೊಂದಿಗೆ ಅನ್ನದಾನವನ್ನು ಮಾಡಬೇಕು. ಉಡುಪಿಯಲ್ಲಿ ಅನ್ನಬ್ರಹ್ಮ ಎಂದೇ ಪ್ರಸಿದ್ಧನಾದ ಶ್ರೀ ಕೃಷ್ಣ ಪರಮಾತ್ಮನಿಗೆ ನೈವೇದ್ಯ ಮಾಡಿ ನಿರಂತರ ಅನ್ನದಾನ ನಡೆಯುತ್ತಿರುವುದನ್ನು ನೀವುಗಳು ಕಾಣುತ್ತೀರಿ. ಇದೆಲ್ಲ ಯಾವ ಅನುಸಂಧಾನದಿಂದ ಎಂದರೆ ಬಂದ ಎಲ್ಲ ಭಕ್ತರಲ್ಲಿ ಯಾತ್ರಿಕರಲ್ಲಿ ಶ್ರೀಕೃಷ್ಣ ಪರಮಾತ್ಮನು ಇದ್ದಾನೆ ಪ್ರತಿಮೆಯಲ್ಲಿರುವ ಪರಮಾತ್ಮನಿಗೆ ಒಂದು ನೈವೇದ್ಯವಾದರೆ ಭಕ್ತರಲ್ಲಿ ಸನ್ನಿಹಿತನಾದ ಪರಮಾತ್ಮನಿಗೂ ಒಂದು ನೈವೇದ್ಯ ಎಂದು ಬರುವ ಭಕ್ತರಿಗೆ ಪರ್ಯಾಯ ಶ್ರೀಪಾದರು ನಿರಂತವಾಗಿ ಅನ್ನದಾನವನ್ನು ಮಾಡುವ ಪದ್ಧತಿ ಶ್ರೀಮದಾಚಾರ್ಯರ ಕಾಲದಿಂದ ಇಂದಿನಿಂದಲೂ ನಡೆದು ಬಂದಿದೆ. ಆ ತರಹದ ಅನ್ನದಾವನ್ನು ಮಾಡ ಬೇಕೇ ಹೊರತು, ಕೇವಲ ಸ್ವಾರ್ಥಕ್ಕಾಗಿ ಬೇಯಿಸಿಕೊಂಡು ತಿಂದರೆ ಅಂತಹವರಿಗೆ ಉದರರೋಗವಾಗುತ್ತದೆ.