ಬೀದಿ ನಾಯಿ ಕಡಿತ: ಮಕ್ಕಳಿಗೆ ಗಂಭೀರ ಗಾಯ

Advertisement

ವಿಜಯಪುರ: ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು, ಮಂಗಳವಾರ ಮೂವರು ಮಕ್ಕಳಿಗೆ ಬೀದಿ ನಾಯಿ ಕಚ್ಚಿದ್ದರಿಂದ ಗಂಭೀರ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಬಡಿಕಮಾನ ಬಳಿ ಸೋಮವಾರ ಮಕ್ಕಳ ಮೇಲೆ ಬೀದಿ ನಾಯಿಗಳು ತೀವ್ರ ದಾಳಿ ನಡೆಸಿದ್ದು, ಸೋಂಟ, ಕೈ, ದುಬ್ಬದ ಭಾಗದಲ್ಲಿ ಗಾಯಗೊಳಿಸಿವೆ. ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳಿಗೆ ರೇಬಿಸ್ ಚುಚ್ಚು ಮದ್ದು ನೀಡಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಸೋಮವಾರ ಮೂವರು ಮಕ್ಕಳಿಗೆ ನಾಯಿ ಕಚ್ಚಿರುವ ಘಟನೆ ಮಾಸುವ ಮುನ್ನವೇ ಬೀದಿನಾಯಿಗಳು ಮತ್ತೆ ದಾಳಿ ಮಾಡಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿದೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಬಡಿಕಮಾನ, ಬಾಗಾಯತ್ ಕಾಲೋನಿ, ಯೋಗಾಪುರ ಕಾಲೋನಿ ಗುನ್ನಾಪುರ ರಸ್ತೆಯ ಗೋಡಾವನ್ ಬಳಿ, ಹಕೀಮ್ ಚೌಕ್ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಹಾಗೂ ಮೌಂಸದ ಅಂಗಡಿಗಳು ಹೆಚ್ಚಾಗಿರುವ ಏರಿಯಾಗಳಲ್ಲಿ ಬೀದಿ ನಾಯಿಗಳ ಹಾವಳಿ ಜೋರಾಗಿದ್ದು ಪಾಲಿಕೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎನ್ನುವ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.