24 ಗಂಟೆಯೊಳಗೆ ಬಂಧಿತರನ್ನು ಬಿಡುಗಡೆ ಮಾಡಿ: ಎಸ್​ಡಿಪಿಐ ಎಚ್ಚರಿಕೆ

SDPI
Advertisement

ಬಂಧಿತರಾಗಿರುವ 5 ಮಂದಿ ಪಿಎಫ್​ಐ ಮುಖಂಡರನ್ನು 24 ಗಂಟೆಯೊಳಗೆ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಸ್​ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಎಚ್ಚರಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಚೇರಿ ಬೀ ತುಂಡರಿಸಿ ಕಚೇರಿಯ ಅಗ್ರಿಮೆಂಟ್ ಕಾಪಿ, ಎಸ್​ಡಿಪಿಐ ಕಾರ್ಯಕ್ರಮದ ಫೈಲ್, ಫೋಟೋ, ಲ್ಯಾಪ್‌ಟಾಪ್, 2 ಹಾರ್ಡ್ ಡಿಸ್ಕ್, ಎರಡು ಬುಕ್ ಲೆಟ್ ತೆಗೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ನುರಿತ ವಕೀಲರ ಮೂಲಕ ಕಾನೂನು ಹೋರಾಟ ಮಾಡಲಾಗುವುದು ಎಂದರು.