ಯಶ್ ಹೊಸ ಸಿನಿಮಾ ‘ಟಾಕ್ಸಿಕ್’

Advertisement

ಬೆಂಗಳೂರು: ನಟ ಯಶ್‌ ತಮ್ಮ ಹೊಸ ಸಿನಿಮಾದ ಟೈಟಲ್ ಅನ್ನು ಡಿ.8ರಂದು ಬೆಳಗ್ಗೆ 9.55ಕ್ಕೆ ಲಾಂಚ್ ಮಾಡುವುದಾಗಿ ರಾಕಿಭಾಯ್ ಘೋಷಣೆ ಮಾಡಿದ್ದರು, ರಾಕಿಂಗ್ ಸ್ಟಾರ್ ಯಶ್ ಅಭಿನಯದ 19ನೇ ಸಿನಿಮಾದ ಶೀರ್ಷಿಕೆ ಇಂದು ಘೋಷಣೆಯಾಗಿದೆ. ಚಿತ್ರಕ್ಕೆ ‘ಟಾಕ್ಸಿಕ್’ (Toxic) ಟೈಟಲ್ ನೀಡಿರುವ ಚಿತ್ರ ತಂಡ ಪೋಸ್ಟರ್‌ನ್ನು ಬಿಡುಗಡೆ ಮಾಡಿದೆ. ಕೆವಿನ್‌ ಪ್ರೊಡಕ್ಷನ್ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ, ‘ಟಾಕ್ಸಿಕ್’ ಚಿತ್ರಕ್ಕೆ ಗೀತು ಮೋಹನ್​ದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಟೈಟಲ್ ನೋಡಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ. ಹಿನ್ನೆಲೆ ಸಂಗೀತ ಕೂಡ ಗಮನ ಸೆಳೆದಿದೆ. ಈ ಚಿತ್ರದ ರಿಲೀಸ್ ದಿನಾಂಕವನ್ನೂ ರಿವೀಲ್ ಮಾಡಲಾಗಿದೆ. 10-4-2025ರಂದು ಸಿನಿಮಾ ಥಿಯೇಟರ್​ನಲ್ಲಿ ರಿಲೀಸ್ ಆಗಲಿದೆ.