ಪುರಸಭೆ ಕಚೇರಿ‌ ಮೇಲೆ ಲೋಕಾಯುಕ್ತ ದಾಳಿ : ಮುಖ್ಯಾಧಿಕಾರಿ ಸೇರಿದಂತೆ ಇಬ್ಬರ ವಶ

Advertisement

ಶ್ರೀರಂಗಪಟ್ಟಣ: ನಿವೇಶನಕ್ಕೆ ಸಂಬಂಧಿಸಿದಂತೆ ಪೌತಿ ಖಾತೆ ಮಾಡಿಕೊಡಿಕೊಡುವ ವಿಷಯವಾಗಿ ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೆ ಪುರಸಭೆ ಮುಖ್ಯಾಧಿಕಾರಿ ರಾಣಿ ಹಾಗೂ ಕಂದಾಯ ಅಧಿಕಾರಿ ಗಿರೀಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಮಂಡ್ಯ ಚಾಮುಂಡೇಶ್ವರಿ ನಗರದಲ್ಲಿ ವಾಸವಿರುವ ಪ್ರಶಾಂತ್ ಎಂಬುವವರಿಗೆ ಸೇರಿದ ಗಂಜಾಂ ನಲ್ಲಿ ತಾಯಿ ಅವರ ಹೆಸರಿನಲ್ಲಿ ಜಂಟಿ ಖಾತೆಯಲ್ಲಿದ್ದ ನಿವೇಶವನ್ನು ತಾಯಿ ಮರಣ ನಂತರ ತನ್ನ ಹೆಸರಿಗೆ ಪೌತಿ ಖಾತೆ ಮಾಡಿಕೊಡಲು ಅಕ್ಟೋಬ‌ರ್ ತಿಂಗಳಲ್ಲಿ ಪುರಸಭೆಗೆ ಮನವಿ ಮಾಡಿದ್ದರು.

ಈ ಸಂಬಂಧ ಕಂದಾಯ ಇಲಾಖೆ ಅಧಿಕಾರಿ ಗಿರೀಶ್ ಹಾಗೂ ಮುಖ್ಯಾಧಿಕಾರಿ 1.80 ಲಕ್ಷ ರೂ.ಗಳಿಗೆ ಬೇಡಿಕೆಯಿಟ್ಟಿದ್ದರು‌ ಎನ್ನಲಾಗಿದೆ.

ಈ ಸಬಂಧ ಪ್ರಶಾಂತ್ ಲೋಕಾಯುಕ್ತರಿಗೆ ದೂರು ನೀಡಿದ್ದ ಹಿನ್ನಲೆಯಲ್ಲಿ, ಲೋಕಾಯುಕ್ತ ಎಸ್‌ಪಿ ವಿ.ಜಿ ಸುಜಿತ್ ಅವರ ಮಾರ್ಗದರ್ಶಿನದಲ್ಲಿ ಡಿವೈಎಸ್‌ಪಿ ಸುನೀಲ್‌ಕುಮಾರ್, ಇನ್ಸಪೆಕ್ಟ‌ರ್ ಮೋಹನ್ ರೆಡ್ಡಿ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಶನಿವಾರ ಮಧ್ಯಾಹ್ನ ಕಚೇರಿಯಲ್ಲಿ ಪುರಸಭೆ ಮುಖ್ಯಾಧಿಕಾರಿ ರಾಣಿ 1 ಲಕ್ಷ ರು. ಮುಂಗಡ ಹಣ ಪಡೆಯುತ್ತಿದ್ದ ವೇಳೆ ಹಣ ಸಹಿತಿ ಗಿರೀಶ್ ಹಾಗೂ ರಾಣಿ ಅವರನ್ನು ವಶಕ್ಕೆ ಪಡೆದು‌ ಮುಂದಿನ ಕ್ರಮ ಕೈಗೊಂಡಿದ್ದಾರೆ.