ಜಾತಿಗಣತಿಯಲ್ಲ, ಸಾಮಾಜಿಕ ಸ್ಥಿತಿಗತಿ ಗಣತಿ

Advertisement

ಕೊಪ್ಪಳ: ಈಗಾಗಲೇ ಮಾಡಿಸಿರುವ ಸಮೀಕ್ಷೆ ಜಾತಿಗಣತಿ ಅಲ್ಲ, ಸಾಮಾಜಿಕ ಸ್ಥಿತಿಗತಿ ಗಣತಿಯಾಗಿದೆ. ಅದರಲ್ಲಿ ಜಾತಿ ಕಾಲಂ ಇದ್ದು, ಇದರಿಂದಾಗಿ ಕೆಲವರಿಗೆ ಆತಂಕ ಎದುರಾಗಿದೆ ಎಂದು ಯಲಬುರ್ಗಾ ಶಾಸಕ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.
ತಾಲೂಕಿನ ಬೇವೂರು ಗ್ರಾಮದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಮಾಡಬೇಕು ಎಂದು ಹೇಳಿದ್ದು, ಅದಕ್ಕೆ ನಾವು ಒಪ್ಪಿಕೊಂಡಿದ್ದೇವೆ. ಜಾತಿಗಣತಿ ಏನಾಗಿದೆ ಎಂದು ಮೊದಲು ಬಿಡುಗಡೆ ಮಾಡಲಿ. ಅದು ಜಾತಿಗಣತಿ ಅಲ್ಲ, ಸಾಮಾಜಿಕ ಸ್ಥಿತಿಗತಿ ಗಣತಿಯಾಗಿದೆ. ಅದರಲ್ಲಿ ಜಾತಿ ಕಾಲಂ ಇದ್ದು, ಇದರಿಂದಾಗಿ ಕೆಲವರಿಗೆ ಆತಂಕ ಎದುರಾಗಿದೆ ಎಂದರು.
ಉಪ ಪಂಗಡಗಳ ಹೆಸರು ಬರೆಸಿದ್ದು, ಇದರಿಂದ ಲಿಂಗಾಯತರು ಮತ್ತು ಒಕ್ಕಲಿಗರಲ್ಲಿ ಆತಂಕ ಶುರುವಾಗಿದೆ. ಪುನಃ ಸಮೀಕ್ಷೆ ಮಾಡದರೂ ತಪ್ಪೇನಿಲ್ಲ. ಎರಡು ತಿಂಗಳಲ್ಲಿ ಮತ್ತೊಮ್ಮೆ ಸಮೀಕ್ಷೆ ಮಾಡಿಸಬಹುದು. ವರದಿ ಸರಿಯಾಗಿದ್ದರೆ ಇಟ್ಟುಕೊಳ್ಳಲಿ, ಇಲ್ಲವೇ ಹೊಸ ಸರ್ವೇ ಮಾಡಿಸಲಿ. ಜನ ಜಾತಿ ಹಣಕ್ಕೆ ಮತ ಹಾಕಲ್ಲ. ಜನ ಹುಷಾರಾಗಿದ್ದಾರೆ. ನಾವು ಜಾತಿ ಮತ್ತು ಹಣದ ಮೇಲೆ ಚುನಾವಣೆ ಮಾಡುತ್ತೇವೆ. ಜಾತಿ ಗಣತಿಗೂ ಚುನಾವಣೆಗೂ ಸಂಬಂಧ ಇಲ್ಲ ಎಂದು ತಿಳಿಸಿದರು.