ಅಪಾಯಕ್ಕೆ ಆಹ್ವಾನ ನೀಡುತ್ತಿದೆ ವಿದ್ಯುತ್ ಪರಿವರ್ತಕ

Advertisement

ಕೂಡ್ಲಿಗಿ: ಸುತ್ತಮುತ್ತಲಿನ ಗ್ರಾಮಗಳಲ್ಲಿ ನೂರಾರು ವಿದ್ಯುತ್ ಪರಿವರ್ತಕಗಳಿವೆ. ಆದರೆ,ಕೆಲವು ಕಡೆ ಪರಿವರ್ತಕ (ಟಿ.ಸಿ.) ಗಳ ಸುತ್ತ ತಂತಿ ಬೇಲಿ ಅಳವಡಿಸಿಲ್ಲ. ಸುರಕ್ಷತಾ ಕ್ರಮಗಳನ್ನೂ ಅನುಸರಿಸಿಲ್ಲ. ಕೆಲ ವಿದ್ಯುತ್ ಪರಿವರ್ತಕಗಳು ಬಾಗಿದ ವಿದ್ಯುತ್ ಕಂಬಗಳಲ್ಲಿ ನೇತಾಡುವಂತೆ ಕಂಡು ಬಂದರೆ, ಇನ್ನು ಕೆಲವು ಕಡೆ ನೆಲಮಟ್ಟದಲ್ಲಿ ಇವೆ. ಇವು ಜಾನುವಾರುಗಳಿಗೆ ಅಷ್ಟೇ ಅಲ್ಲ ಸಾರ್ವಜನಿಕರಿಗೂ ಅಪಾಯ ತಂದೊಡ್ಡುತ್ತವೆ.
ತಾಲೂಕಿನ ಗಡಿ ಗ್ರಾಮ (ಆರ್ನಾಳಹಟ್ಟಿ) ಗಡ್ಡದಬೋರಯ್ಯನಹಟ್ಟಿ ಗ್ರಾಮದಲ್ಲಿ ವಿದ್ಯುತ್ ಪರಿವರ್ತಕದ ಮೇಲೆ ಬಳ್ಳಿ ಬೆಳೆದು ವಿದ್ಯುತ್ ಪ್ರವಹಿಸುವ ತಂತಿಯವರೆಗೆ ತಲುಪಿದೆ. ಸಿಬ್ಬಂದಿ ವಿದ್ಯುತ್ ಪರಿವರ್ತಕದ ಮೇಲಿನ ಬಳ್ಳಿಯನ್ನು ತೆರವುಗೊಳಿಸಿಲ್ಲ.
ಕೂಗಳತೆ ದೂರದಲ್ಲಿ ಸರ್ಕಾರಿ ಶಾಲೆ ಇದ್ದು ಮಕ್ಕಳು ಆಟವಾಡುತ್ತ ಇಲ್ಲಿಗೆ ಬಂದು ಅಪ್ಪಿತಪ್ಪಿ ಕಂಬ ಮುಟ್ಟಿದರೂ ಪ್ರಾಣಾಪಾಯ ತಪ್ಪಿದ್ದಲ್ಲ.