ಮತಾಂತರದ ಹಿಂದೆ ಮದರಸಾ ಕೈವಾಡ: ಪ್ರಮೋದ ಮುತಾಲಿಕ

ಮುತಾಲಿಕ
Advertisement

ಧಾರವಾಡ: ಮಂಡ್ಯ ಮೂಲದ ಯುವಕನ ಮತಾಂತರ ಪ್ರಕರಣ ಹಿಂದೆ ಕೇವಲ 11 ಜನರು ಮಾತ್ರವಲ್ಲದೇ ಮಸೀದಿ, ಮದರಸಾ ಕೆಲಸ ಮಾಡುತ್ತಿವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಆರೋಪಿಸಿದರು.
ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸರಕಾರ ಇತ್ತೀಚೆಗೆ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿದೆ. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಮತಾಂತರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಅಂದಾಗ ಮಾತ್ರ ಈ ರೀತಿಯ ಪ್ರಕರಣಗಳು ಹೊರಬರುತ್ತವೆ ಎಂದರು.
ಶ್ರೀಧರ ಹುಡುಗಿಯನ್ನು ಭೇಟಿಯಾಗಲು ಬಂದಿದ್ದನೋ ಏನೋ ಗೊತ್ತಿಲ್ಲ. ಆತನಿಗೆ ಬಲವಂತದ ಖತ್ನಾ ಮಾಡಲಾಗಿದೆ. ಜೊತೆಗೆ ಪಿಸ್ತೂಲ್ ನೀಡಿ ಫೋಟೋ ತೆಗೆಯಲಾಗಿದೆ. ೩೫ ಸಾವಿರ ರೂ.ಗಳನ್ನು ಖಾತೆಗೆ ಹಾಕಲಾಗಿದೆ. ಇದರಿಂದ ಬೇಸರಗೊಂಡ ಈತ ಸ್ವತಃ ದೂರು ದಾಖಲಿಸಿದ್ದಾನೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಕುರಿತು ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ. ಅಲ್ಲದೇ ಯಾವ ಯಾವ ಮಸೀದಿಗಳಲ್ಲಿ ಮತಾಂತರ ನಡೆಯುತ್ತಿದೆ ಎನ್ನುವ ಮಾಹಿತಿಯನ್ನೂ ನೀಡುತ್ತೇನೆ ಎಂದರು.