ಸರ್ಕಾರದ ಮೇಲೆ ಯತ್ನಾಳ ಗರಂ

Advertisement

ವಿಜಯಪುರ: ನಗರದ ಬಿಜೆಪಿ ಮಹಾನಗರ ಪಾಲಿಕೆ ಸದಸ್ಯರೋರ್ವರು ಅಕಾಲಿಕ ನಿಧನರಾದ ಪ್ರಯುಕ್ತ ಚುನಾವಣಾ ಮುಂದೂಡಬೇಕು ಎಂದು ಕೋರ್ಟ್ ಮೆಟ್ಟಿಲೇರಲಾಗಿತ್ತು, ಈ ಬಗ್ಗೆ ಹೈಕೋರ್ಟ್ ಪ್ರಾದೇಶಿಕ ಆಯುಕ್ತರಿಗೆ ನೋಟಿಸ್ ನೀಡಿದರೂ ಸಹ ಅದನ್ನೆಲ್ಲವನ್ನೂ ಬದಿಗೊತ್ತಿ ಜಿಲ್ಲಾ ಉಸ್ತುವಾರಿ ಸಚಿವರ ಅಣತಿಯಂತೆ ಪ್ರಾದೇಶಿಕ ಆಯುಕ್ತರು ಚುನಾವಣಾ ಪ್ರಕ್ರಿಯೆ ನಡೆಸಿರುವುದು ಖಂಡನೀಯ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಕ್ರೋಶ ಹೊರಹಾಕಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ರೀತಿ ಏಕಪಕ್ಷೀಯವಾಗಿ ಪ್ರಾದೇಶಿಕ ಆಯುಕ್ತರು ವರ್ತನೆ ಮಾಡಿದ್ದಾರೆ, ಈ ಬಗ್ಗೆ ಕಾನೂನಾತ್ಮಕ ಹೋರಾಟ ಕೈಗೊಳ್ಳುವ ಬಗ್ಗೆಯೂ ಚಿಂತನೆ ನಡೆಸಲಾಗುವುದು. ಬಿಜೆಪಿ ಮೇಯರ್ ಹುದ್ದೆ ಅಲಂಕರಿಸಲಿದೆ ಎಂಬ ಅಂಜಿಕೆಯಿಂದಲೇ ಕಾಂಗ್ರೆಸ್ ಆಡಳಿತ ಯಂತ್ರ ಬಳಸಿ ಈ ರೀತಿ ಮೋಸದಿಂದ ಗೆಲುವು ಸಾಧಿಸಿದೆ, ಇಂದು ಅವರು ಮೋಸದಿಂದ ಗೆಲುವು ಸಾಧಿಸಿದೆ ಅಷ್ಟೇ ಎಂದರು.