ರಾಮ ಮಂದಿರ ಉದ್ಘಾಟನೆಗೆ ಬರಲ್ಲ ಎನ್ನುವ ಕಾಂಗ್ರೆಸ್ ನಿರ್ಣಯ ತುಷ್ಟೀಕರಣಕ್ಕೆ ಹಿಡಿದ ಕೈಗನ್ನಡಿ

Advertisement

ಸುಬ್ರಹ್ಮಣ್ಯ: ನೆಹರೂ, ಇಂದಿರಾ ನಂತರದ ಕಾಂಗ್ರೆಸ್‌ನ ಮನಸ್ಥಿತಿ ಹಿಂದೂ ವಿರೋಧಿ ಅಷ್ಟೇ ಅಲ್ಲ ಕೇವಲ ತುಷ್ಟೀಕರಣದ ರಾಜನೀತಿ ಮಾಡುವಂತಹದ್ದನ್ನು ಇವತ್ತು ಸ್ಪಷ್ಟವಾಗಿ ರಾಮ ಮಂದಿರ ಉದ್ಘಾಟನೆ ಬರಲ್ಲ ಎನ್ನುವ ನಿರ್ಣಯ ಸ್ಪಷ್ಟವಾಗಿ ಹೇಳುತ್ತದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಟೀಕಿಸಿದರು.
ಅವರು ಬುಧವಾರ ರಾತ್ರಿ ಕಡಬ ತಾಲೂಕಿನ ಬಳ್ಪದಲ್ಲಿ ಮಾಧ್ಯಮದವರ ಜೊತೆ ಈ ಕುರಿತು ಪ್ರತಿಕ್ರಿಯಿಸಿ, ದೇಶದ ಅಸ್ಮಿತೆ, ಸಂಸ್ಕೃತಿ, ನಮ್ಮ ಪರಂಪರೆಗೆ ವಿರುದ್ಧವಾಗಿ ಕಳೆದ ೭೫ ವರ್ಷಗಳಿಂದ ರಾಜಕರಣ ಮಾಡುವುದು, ಕೇವಲ ಅಲ್ಪಾಂಖ್ಯಾತರಿಗೆ ತುಷ್ಟೀಕರಣ ಇದುವೊಂದು ಹಿಡಿದ ಕೈಗನ್ನಡಿ. ಇಂತಹ ಕಾಂಗ್ರೆಸ್‌ಗೆ ಈ ದೇಶದ ಹಿಂದುಗಳು, ಎಲ್ಲಾ ಧರ್ಮದವರು ಅವರಿಗೆ ರಾಜಕರಣದಿಂದ ಮರೆಮಾಡಬೇಕು ಎಂದು ವಿನಂತಿಸುತ್ತೇನೆ ಎಂದು ಹೇಳಿದರು.
ನಾನು ಬಿಜೆಪಿ ಸಭೆಯಿಂದ ಎದ್ದು ಬಂದಿದ್ದೇನೆ ಆದರೆ ಎನ್ನುವುದು ಸತ್ಯಕ್ಕೆ ದೂರವಾದುದು. ಆ ಸಭೆಯಲ್ಲಿ ಪ್ರತೀ ಲೋಕಸಭಾ ಕ್ಷೇತ್ರದ ಸ್ಥಿತಿಗಳು ಹಾಗೂ ಸಂಘಟನೆ ಮತ್ತಿತರ ವಿಚಾರ ಚರ್ಚಿಸಲಾಗಿದೆ. ಅಲ್ಲಿ ಯಾರ ಪರ ಯಾರ ವಿರೋಧ ಅಭಿಪ್ರಾಯ ಪಡೆಯುವ ಸಭೆ ನಡೆದಿಲ್ಲ. ಟಿಕೆಟ್ ಹಂಚಿಕೆ ಕೇಂದ್ರದವರು ಅನೇಕ ಅಯಾಮ ಮತ್ತು ಮಾನದಂಡಗಳಲ್ಲಿ ಮಾಡುತ್ತಾರೆ. ಸಭೆಯಿಂದ ಹೊರನಡೆದಿಲ್ಲ, ಮಂಗಳೂರಿಗೆ ಬರುವ ಕಾರ್ಯಕ್ಕೆ ತೆರಳಲು ರಾಜ್ಯಾಧ್ಯಕ್ಷರಿಂದ ಅನುಮತಿ ಪಡೆದು ಸಭೆಯಿಂದ ಬಂದಿದ್ದೇನೆ ಎಂದರು.