ಅಮೃತ ಸಮಾಚಾರ

Advertisement

೭೫ ವರ್ಷಗಳ ಹಿಂದೆ… ೧೯-೦೧-೧೯೪೯ ಬುಧವಾರ

ಏಶಿಯಾ ಪರಿಷತ್ತು ಯು.ರಾ. ಸಂಘಕ್ಕೆ ದಾರಿ ತೋರಲಿ
ಹೊಸದಿಲ್ಲಿ ತಾ. ೧೮- ಯುಕ್ತರಾಷ್ಟ್ರ ಸಂಘ ಮತ್ತು ಭದ್ರತಾ ಮಂಡಳಿಗಳಿಗೆ ಇದುವರೆಗೆ ಸಾಧಿಸಲು ಅಸಾಧ್ಯವಾದ ಆಟ್ಲಾಂಟಿಕ ತಾಮ್ರ ಪಟದ ಗೊತ್ತುಗುರಿಗಳನ್ನು ಕಾರ‍್ಯಕಾರಿಯಾಗಿಸಲು ರಾಷ್ಟ್ರ ರಾಷ್ಟ್ರಗಳಲ್ಲಿ ಸಹಕಾರದಿಮದ ಕಾರ‍್ಯವೆಮತು ನಡೆಯಬೇಕು ಎಂಬುದನ್ನು ಕುರಿತು ಏಶಿಯಾ ಪರಿಷತ್ತು ಯುಕ್ತ ರಾಷ್ಟ್ರ ಸಂಘ ಮತ್ತು ಭದ್ರತಾ ಮಂಡಳಗಳಿಗೆ ಮಾರ್ಗದರ್ಶನ ಮಾಡುವದೆಂದು ಹಾರೈಸುತ್ತೇವೆ ಎಂದು ಈಗ ಸುಮಾತ್ರಾದಲ್ಲಿ ಆಡಳಿತ ನಡೆಸುತ್ತಿರುವ ಇಂಡೋನೇಶಿಯಾದ ತಾತ್ಪರ‍್ತಿಕ ಪ್ರಜಾರಾಜ್ಯವು ಪಂ. ಜವಾಹರಲಾಲರಿಗೆ ಒಂದು ಪತ್ರವನ್ನು ಬರೆದಿದೆ.
ಆಕಾಶವಾಣಿ ಮೂಲಕ ಸುಮಾತ್ರಾದಿಂದ ಬಿತ್ತರಿಸಲಾದ ಈ ಪತ್ರವನ್ನು ದಿಲ್ಲಿಯಲ್ಲಿರುವ ಇಂಡೋನಶಿಯಾದ ಪ್ರತಿನಿಧಿ ಡಾ. ಸೋಯದರ್ಶನರು ನಿನ್ನೆ ಪಂ. ನೆಹರೂರಿಗೆ ಕೊಟ್ಟರು. ಈ ಪತ್ರಕ್ಕೆ ಶರೀಫುದ್ದೀನರ ಸಹಿಯಿದೆ.

ಮದ್ರಾಸವು ಪ್ರತ್ಯೇಕ ಪ್ರಾಂತವಾಗಬೇಕು
ಮದ್ರಾಸ ೧೮- ನಾಗರಿಕರ ಹಿತವನ್ನು ಗಮನಿಸುವದೇ ಪೌರ ಸಭಾ ಸದಸ್ಯರ ಆದ್ಯ ಕರ್ತವ್ಯವಾಗಿದೆ. ಇದನ್ನು ಗಮನಿಸಿದರೆ ಮಾತ್ರ ಅವರು ಪೌರ ಸಭಾ ಸದಸ್ಯರಾಗಲು ಯೋಗ್ಯರಾಗುವರು ಎಂದು ಡಾ. ಪಟ್ಟಾಭಿಯವರು ಮದ್ರಾಸ ಕಾರ್ಪೊರೇಶನದವರು ಇಂದು ಸಂಜೆಗೆ ಕೊಟ್ಟ ಮಾನಪತ್ರಕ್ಕೆ ಉತ್ತರಿಸುತ್ತ ಹೇಳಿದರು.
ಇಲ್ಲಿ ಈ ನಗರದಲ್ಲಿ ಆಹಾರವು ಶುದ್ಧ ಸ್ವರೂಪದಲ್ಲಿ ದೊರೆಯುವದಿಲ್ಲೆಂಬ ದೂರು ಕೇಳಬರುತ್ತಿದೆ. ಇಂಥ ಸಂಗತಿಯನ್ನು ನಡೆಯಗೊಡುವದು ಕಾರ್ಪೊರೇಶನ್ನಿಗೆ ಲಾಭಂನಾಸ್ಪದನಗರದ ಜನರ ಆರೋಗ್ಯಕ್ಕೂ ನೆಮ್ಮದಿಗೂ ಕಾರಣವಾದ ನಗರ ನೈರ್ಮಲ್ಯವನ್ನು ಕಾಪಾಡಿಕೊಳ್ಳಲಿಕ್ಕಾಗದ ಇಂಥ ಆಡಂಬರದ ಸಂಸ್ತೆಯಿದ್ದೇನು ಪ್ರಯೋಜನ? ನೀವು ನಿಮ್ಮ ಮತದಾರ ಸಂಘದ ಕಲ್ಯಾಣವನ್ನೇ ಚಿಂತಿಸುವಿರಿ ಎಂದು ಜನರಿಗೆ ಮನವರಿಕೆಯಾದರೆ ಕಾರ್ಪೋರೇಶನದಲ್ಲಿ ನಿಮ್ಮ ಸ್ಥಾನ ಕಾಯ್ದಿಟ್ಟಂತೆಯೇ.