ಅಶೋಕ, ಬೊಮ್ಮಾಯಿ ಸೇರಿದಂತೆ ಬಿಜೆಪಿ ಮುಖಂಡರು ಪೊಲೀಸರ ವಶಕ್ಕೆ

Advertisement

ಹಾವೇರಿ: ಹಾನಗಲ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸುವಂತೆ ಆಗ್ರಹಿಸಿ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ವಿಪಕ್ಷನಾಯಕ ಆರ್. ಅಶೋಕ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಬಿ.ಸಿ. ಪಾಟೀಲ ಸೇರಿದಂತೆ ನೂರಾರು ಬಿಜೆಪಿ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಶನಿವಾರ ಜರುಗಿತು.
ಇಲ್ಲಿನ ಕಾಗಿನೆಲೆ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಆಗಮಿಸಿದ ಬಿಜೆಪಿ ಮುಖಂಡರು ಎಸ್ಪಿ ಕಚೇರಿ ಎದುರು ರಸ್ತೆ ಸಂಚಾರಕ್ಕೆ ತಡೆಯೊಡ್ಡಿ ಪ್ರತಿಭಟಿಸಿದರು. ಬಳಿಕ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಾ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ವಶಕ್ಕೆ ಪಡೆದ ಪೊಲೀಸರು ಜೀಪ್ ಹಾಗೂ ಬಸ್‌ನಲ್ಲಿ ಕರೆದ್ಯೊಯ್ದು ಶಹರ ಠಾಣೆಯಲ್ಲಿ ಬಿಟ್ಟರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.
ನಮ್ಮ ಸರ್ಕಾರ ಇದ್ದಾಗ ಗೋವಾ, ಬೆಂಗಳೂರು ಸೇರಿದ್ದವರು ಈಗ ಜಿಲ್ಲೆಗೆ ಬಂದು ಕ್ಲಬ್ ನಡೆಸುತ್ತಿದ್ದಾರೆ. ಎಲ್ಲಾ ಗೊತ್ತಿದ್ದರೂ ಪೊಲೀಸರು ಏನೂ ಮಾಡುತ್ತಿಲ್ಲ, ಪೊಲೀಸ್ ಸ್ಟೇಷನ್‌ಗಳು ಸೆಟ್ಲಮೆಂಟ್ ಸೆಂಟರ್‌ಗಳಾಗಿವೆ. ಹಾನಗಲ್ಲ ಪೊಲೀಸರು ಇಡೀ ಪ್ರಕರಣ ಮುಚ್ಚಿ ಹಾಕಲಿ ಪ್ರಯತ್ನ ಮಾಡಿದ್ದರು. ಸಿಎಂಗೆ ಮುಖಭಂಗ ಆಗುತ್ತೆ ಅಂತಾ ಸಂತ್ರಸ್ತೆಗೆ ಸರಿಯಾದ ಚಿಕಿತ್ಸೆ ಕೊಡಿಸದೇ ಮನೆಗೆ ಕಳುಹಿಸಿದರು. ದೂರು ನೀಡಿದಂತೆ ಸಂತ್ರಸ್ತೆಗೆ ಆಮಿಷವೊಡ್ಡಿದ್ದರು. ಹಾನಗಲ್ಲ ಪಿಎಸ್‌ಐ ಎಲ್ಲಾ ವ್ಯವಹಾರ ಮಾಡಿದ್ದು. ಆದರೆ, ಅವರನ್ನು ಅಮಾನತ್ತು ಮಾಡಿಲ್ಲ, ಇಬ್ಬರು ಅಮಾಯಕರನ್ನು ಬಂಧಿಸಿದ್ದಾರೆ. ಸ್ಥಳೀಯ ಪೊಲೀಸರಿಂದ ನ್ಯಾಯ ಸಿಗುತ್ತಿಲ್ಲ, ಹೀಗಾಗಿ ಎಸ್‌ಐಟಿ ತನಿಖೆಗೆ ವಹಿಸಲೇಬೇಕು. ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಆಗಬೇಕು. ಸಂತ್ರಸ್ತೆಗೆ ಸೂಕ್ತ ರಕ್ಷಣೆ ಜತೆಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ ಮಾತನಾಡಿ, ಡಿಸಿಎಂ ಡಿ.ಕೆ. ಶಿವಕುಮಾರ ಅವರು ಮುಸ್ಲಿಂರು ನಮ್ಮ ಬದ್ರರ್ಸ್, ಸಿಸ್ಟರ್‌ ಎಂದಿದ್ದರು.
ಇಲ್ಲಿ ಸಿಸ್ಟರ್ ರೇಪ್ ಆಗಿದೆ ಅಲ್ವಾ..? ಎಲ್ಲಪ್ಪಾ ನಿಮ್ಮ ಬ್ರದರ್ ಸಿಸ್ಟರ್‌ಗಳು..?, ರೇಪಿಸ್ಟ್‌ಗಳು, ಬ್ಯ್ಲಾಸ್ಟ್ ಮಾಡೋರು ನಿಮ್ ಬ್ರದರ್‌ಗಳಾ ಎಂದು ಕಿಡಿಕಾರಿದರು.