ಬಾಗಲಕೋಟೆಯಲ್ಲಿ 7 ಪಿಎಫ್ಐ ಮುಖಂಡರ ಬಂಧನ

Advertisement

ಬಾಗಲಕೋಟೆ: ಶಾಂತಿ‌ ಪಾಲನೆ ದೃಷ್ಟಿಯಿಂದ ಮುಂಜಾಗೃತಾ ಕ್ರಮವಾಗಿ ಜಿಲ್ಲೆಯಲ್ಲಿ ೭ ಪಿಎಫ್ಐ ಸಂಘಟನೆ‌ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ.

ಜಮಖಂಡಿ, ಇಳಕಲ್, ಬನಹಟ್ಟಿಯಲ್ಲಿ ಕಾರ್ಯಾಚರಣೆ ಕೈಗೊಂಡಿರುವ ಪೊಲೀಸರು ಸಂಘಟನೆ ಜಿಲ್ಲಾಧ್ಯಕ್ಷ ಅಸ್ಗರ್ ಅಲಿ, ಇರ್ಫಾನ್, ಮೊಹಮ್ಮದ್, ರಾಜೇದಾಬ್, ಮುರ್ತುಜ, ಉಮರ್ ಫಾರೂಕ್, ಮುಸಾ ಅವರುಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಿಂದರ ಪ್ರತಿಭಟನೆ ನೆಪದಲ್ಲಿ ಶಾಂತಿ‌‌ಕದಡುವ ಆರೋಪ ಈ ಏಳು ಜನರ ಮೇಲಿತ್ತು ಹೀಗಾಗಿ ಬಂಧಿಸಲಾಗಿದೆ ಎಂದು ಎಸ್ಪಿ ಜಯಪ್ರಕಾಶ ಮಾಹಿತಿ ನೀಡಿದ್ದಾರೆ.