ಬನಶಂಕರಿ ರಥೋತ್ಸವ ಇಂದು

Advertisement

ಬಾದಾಮಿ: ಬಾದಾಮಿ-ಬನಶಂಕರಿದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಮಹಾರಥೋತ್ಸವ ಗುರುವಾರ ನಡೆಯಲಿದೆ. ಮುನ್ನಾ ದಿನವಾದ ಬುಧವಾರ ಪಲ್ಯೇದ ಹಬ್ಬದ ನಿಮಿತ್ತ ಶ್ರೀದೇವಿಗೆ ತರಹೇವಾರಿ ತರಕಾರಿಗಳಿಂದ ಅಲಂಕಾರ ಮಾಡಲಾಗಿತ್ತು.
೧೦೮ ವಿಧದ ತರಕಾರಿಗಳಿಂದ ದೇವಿಗೆ ಅಲಂಕಾರ ಮಾಡುವುದು ಜಾತ್ರಾ ಮಹೋತ್ಸವದ ಒಂದು ಪ್ರಮುಖ ಘಟ್ಟ. ಇದಕ್ಕೆ ಐತಿಹ್ಯವು ಕೂಡಾ ಇದೆ. ಬರಗಾಲದಂತಹ ಸಂದರ್ಭದಲ್ಲಿ ಶ್ರೀ ದೇವಿಯು ತನ್ನ ಮೈ ಶಾಖದಿಂದ ತರಹೇವಾರಿ ತರಕಾರಿ ಮೂಲಕ ಜನರಿಗೆ ಉಣಬಡಿಸಿ ಹಸಿವು ನೀಗಿಸಿದ್ದಳು ಎಂಬ ಬಗ್ಗೆ ಪುರಾಣ ಕಥೆ ಇದೆ.
೨೫ರಂದು ಸಂಜೆ ೫ ಗಂಟೆಗೆ ಜರುಗಲಿರುವ ಮಹಾ ರಥೋತ್ಸವಕ್ಕೆ ಅರ್ಚಕ ಪೂಜಾರ ಮನೆತನದವರು ರಥವನ್ನು ಶುಚಿಗೊಳಿಸಿ ತಳಿರು ತೋರಣಗಳಿಂದ ಶೃಂಗರಿಸಿದ್ದಾರೆ. ರಥಬೀದಿಯನ್ನು ಕೂಡಾ ಸ್ವಚ್ಛಗೊಳಿಸಲಾಗಿದೆ. ದೇವಸ್ಥಾನದ ಒಳ ಹಾಗೂ ಹೊರ ಪ್ರಾಂಗಣ ವಿದ್ಯುತ್ ದೀಪಾಲಂಕಾರಗಳಿಂದ ಜಗಮಗಿಸುತ್ತಿದೆ.