ಪ್ರತಿಭಟನೆ ಮಾಡಿದ್ದ ಏಳು ಮಂದಿ ಪಿಎಫ್ಐ ಮುಖಂಡರು ಪೊಲೀಸರ ವಶಕ್ಕೆ

Advertisement

ಬೆಳಗಾವಿ: ಪಿಎಫ್ಐ ಮುಖಂಡರ ಮೇಲಿನ ದಾಳಿ ಖಂಡಿಸಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದ್ದ ಏಳು ಮಂದಿ ಪಿಎಫ್ಐ ಮುಖಂಡರನ್ನು ಬೆಳಗಾವಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಿಎಫ್ಐ ಕಾರ್ಯಕರ್ತ ಸಮೀವುಲ್ಲಾ, ಪಿಎಫ್ಐ ಮಾಜಿ ಜಿಲ್ಲಾಧ್ಯಕ್ಷ ಜಖೀವುಲ್ಲಾ ಫೈಜಿ ಸೇರಿ ಏಳು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅದರಲ್ಲಿ ಓರ್ವನಿಗೆ ಅನಾರೋಗ್ಯ ಹಿನ್ನೆಲೆ ವಶಕ್ಕೆ ಪಡೆಯದೇ ಕೇವಲ ವಿಚಾರಣೆ ನಡೆಸಿದ್ದಾರೆ.

ಬೆಳಗಾವಿಯಲ್ಲಿ 7 ಮಂದಿ ಪಿಎಫ್ಐ ಮುಖಂಡರು ಪೊಲೀಸ್​​ ವಶಕ್ಕೆ

ಕಳೆದ ನಾಲ್ಕು ದಿನಗಳ ಹಿಂದೆ ಎನ್ಐಎ ದಾಳಿ ಖಂಡಿಸಿ ಪಿಎಫ್ಐ ಜಿಲ್ಲಾಧ್ಯಕ್ಷ ನವೀದ್ ಕಟಗಿ ನೇತೃತ್ವದಲ್ಲಿ ತಾಲೂಕಿನ ಕಾಕತಿ ಹೊರವಲಯದಲ್ಲಿರುವ ಪುನಾ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪಿಎಫ್ಐ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದರು. ಮುಂಜಾಗ್ರತಾ ಕ್ರಮವಾಗಿ ಎಸ್‌ಡಿಪಿಐ, ಪಿಎಫ್ಐ ಸಂಘಟನೆ ಜೊತೆಗೆ ಗುರುತಿಸಿಕೊಂಡಿದ್ದ 7 ಜನರನ್ನು ಪಡೆದಿದ್ದು, ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಹೆಚ್ಚಿನ ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ
ಮಹಾನಗರ ಪೊಲೀಸ್ ಉಪ ಆಯುಕ್ತ (ಡಿಸಿಪಿ) ರವೀಂದ್ರ ಗಡಾದಿ ನೇತೃತ್ವದಲ್ಲಿ ಇಂದು ಬೆಳ್ಳಂಬೆಳಗ್ಗೆ 4 ಗಂಟೆಗೆ ಪಿಎಫ್ಐ ಮುಖಂಡರ ಪಟ್ಟಿ ಮಾಡಿಕೊಂಡು ದಾಳಿ ನಡೆಸಿದ್ದಾರೆ. ಮಾರ್ಕೆಟ್ ಎಸಿಪಿಗಳಾದ ನಾರಾಯಣ ಭರಮಣಿ, ಸದಾಶಿವ ಕಟ್ಟಿಮನಿ, ಎಪಿಎಂಸಿ, ಟಿಳಕವಾಡಿ, ಮಾಳ ಮಾರುತಿ ಠಾಣೆಗಳ ಸಿಪಿಐಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.