ಹಸಿದವನಿಟ್ಟು ಉಂಡರೆ ಹರಿ ಒಲಿಯನು…

ಗುರುಬೋಧೆ
PRATHAPPHOTOS.COM
Advertisement

ಹಸಿದ ಹೊಟ್ಟೆಯಿಂದ ತೊಂದರೆ ಪಡುತ್ತಿರುವ ಜನರು ತಿನ್ನಲು ಆಹಾರವಿಲ್ಲವಲ್ಲ ಎಂದು ದುಃಖವನ್ನು ಪಡುತ್ತಿರುತ್ತಾರೆ. ಈ ರೀತಿಯಾಗಿ ಇವನು ಊಟ ಮಾಡುವಾಗ ಮತ್ತೊಬ್ಬ ತನಗೆ ತಿನ್ನಲು ಏನೂ ಇಲ್ಲವಲ್ಲ ಎಂದು ದುಃಖ ಪಡುವಾಗ ಇವನ ಹೊಟ್ಟೆಗೆ ಶಾಂತಿ ಜನ್ಮಾಂತರದಲ್ಲಿ ಸಿಗುವುದಿಲ್ಲ.
ಇನ್ನು ಕೆಲವೊಬ್ಬರು ಕೊಡುವುದಿಲ್ಲ ಎನ್ನುವುದಿಲ್ಲ ಆದರೆ, ದಾಸರು ಹೇಳುತ್ತಾರೆ ತಮ್ಮನೆಯವರಿಗೆ ಘಮ್ಮನೆ ತುಪ್ಪ, ಖಮ್ಮಟ ತುಪ್ಪ ದೇವ ಬ್ರಾಹ್ಮಣರಿಗೆ ಸುಳ್ಳು ಬೇಡುವರೋ ಸುಖವ ಬೇಡರೋ ದುಃಖವ ಮಾಡರೋ ಅದರ ಉಪಾಯವ ಎಂದು ಹೇಳುವಾಗ ತಮ್ಮ ಬಂಧು ಬಾಂಧವರಿಗೆ ಉತ್ತಮವಾದುದನ್ನು ಬಡಿಸಿ ಮತ್ತೊಬ್ಬರಿಗೆ ತಿನ್ನಬಾರದನ್ನು ಹಾಕಿದರೆ ಅದು ಪಾಪ. “ಅಪಥ್ಯ ಆಹಾರ ದಾನೈಶ್ಚ ವಿಶವಸ್ಥಾನಂ ವಿಷಪ್ರದಃ” ಅಪಥ್ಯವಾದ ಆಹಾರವನ್ನು ಕೊಟ್ಟರೇ ಜನ್ಮಾಂತರದಲ್ಲಿ ಉದರರೋಗವು ಉಂಟಾಗುತ್ತದೆ.
ರುಚಿಯಾದ ಮತ್ತು ವಿಹಿತವಾದ ಆಹಾರವಿರಬೇಕು, ಶುದ್ಧವಾದ, ಆರೋಗ್ಯಕರವಾದದ್ದು ಇರಬೇಕು. ಅಪಥ್ಯವಾದುದನ್ನು ಕೊಡಬಾರದು, ಪಥ್ಯವಾದುದನ್ನು ಕೊಡಬೇಕು. ಒಬ್ಬನಿಗೆ ಮಧುಮೇಹವಿದೆ ವೈದ್ಯರು ಅವನು ಸಿಹಿ ಪದಾರ್ಥವನ್ನು ತಿನ್ನಬಾರದೆಂದು ಹೇಳಿದ್ದಾರೆ. ಆದರೆ ಅವನಿಗೆ ಸಿಹಿ ಬೇಡಿದನೆಂದು ಸಿಹಿ ಪದಾರ್ಥ ಉಣಿಸಿದರೆ ಅದು ಆತನ ದೇಹಕ್ಕೆ ಮಾರಕವಾಗುತ್ತದೆ. ಅಂಥ ಸಂದರ್ಭದಲ್ಲಿ ಹಾಕದಿದ್ದರೂ ಯಾವುದೇ ಪಾಪವಿಲ್ಲ. ಅವನಿಗೆ ಪಥ್ಯವಾಗುವ ಆಹಾರವನ್ನೇ ಉಣಿಸಬೇಕು.
ಅಪಥ್ಯ ಆಹಾರ ದಾನೈಶ್ಚ, ಅಪಥ್ಯವಾದ ಅನ್ನ ಎಂದರೆ ಇನ್ನೊಂದು ಅರ್ಥ ದೇವರಿಗೆ ನಿವೇದಿತವಾಗದಂತಹ ಅನ್ನ ಅದನ್ನೂ ಕೂಡಬಾರದು ಪವಿತ್ರವಾದ ಅನ್ನವನ್ನೇ ಕೊಡಬೇಕು. `ಅಭಕ್ಯ ಭಕ್ಷ್ಯ ದಾಶ್ಚೈವ ಶೌಚ ಮಂಗಲ ವರ್ಜಿತಃ’ ಅಂತಾರೆ ಮುಂದೆ ಶೌಚ ಎಂದರೆ ಶುದ್ಧವಾದ ಮಡಿಯಲ್ಲಿ ತಯಾರಾಗಿರಬೇಕು. ಮಡಿ ಎಂದರೆ ಬರೇ ಮಡಿಯಲ್ಲಿ ತಯಾರಾದರೇ ಉಪಯೋಗವಿಲ್ಲ. ಶುದ್ಧತೆಯಲ್ಲಿ ತಯಾರಿಸಿ ಅದನ್ನು ಭಗವಂತನಿಗೆ ನಿವೇದಿಸಿರಬೇಕು ಅಂತಹ ಆಹಾರವನ್ನೇ ತಾನು ಸ್ವೀಕರಿಸಿ ಬಂದ ಅತಿಥಿಗಳಿಗೂ ನೀಡಬೇಕು. ಶ್ರಾದ್ಧದ ಕಾಲದಲ್ಲಿ ದೇವರಿಗೆ ನೈವೇದ್ಯ ಮಾಡದ ಅನ್ನವನ್ನು ಪಿತೃಗಳಿಗೆ ಸಮರ್ಪಿಸಿದರೆ ಅವರಿಗೂ ಅನರ್ಥವಿದೆ. ಜೊತೆಗೆ ಅಂತಹ ಪಿತೃಕಾರ್ಯ ಮಾಡಿದ ವ್ಯಕ್ತಿಗೂ ಅನರ್ಥವಿದೆ. ಆದ್ದರಿಂದ ಸರ್ವಥ ದೇವತೆಗಳಿಗೆ ಪಿತೃಗಳಿಗೆ ಭಗವಂತನಿಗೆ ನಿವೇದಿಸದ ಆಹಾರವನ್ನು ಕೊಡುವಂತಿಲ್ಲ. ದೇವರಿಗೆ ಸಮರ್ಪಿತವಾಗದ ಆಹಾರವನ್ನು ಲಕ್ಷ್ಮಿ ದೇವಿಗೂ ನಿವೇದಿಸುವಂತಿಲ್ಲ. ರಮಾ ಬ್ರಹ್ಮಾದಿಗಳಿಗೂ ದೇವತೆಗಳಿಗೆ, ಋಷಿಗಳಿಗೆ, ಪಿತೃಗಳಿಗೆ ಹಾಗೂ ಮಾನವರಿಗೆ ಎಲ್ಲರಿಗೂ ಕೂಡ ದೇವರಿಗೆ ಸಮರ್ಪಿಸಿದ ಆಹಾರವನ್ನೇ ನೀಡಬೇಕು. ಪಥ್ಯ ಅಂದರೆ ದಾರಿಯಲ್ಲಿದ್ದದು ಎಂದು ಅಪಥ್ಯ ಎಂದರೆ ಶಾಸ್ತ್ರ ವಿಹಿತ ಮಾರ್ಗದಲ್ಲಿ ಯಾವುದು ಇಲ್ಲ ಅದು ಎಂದು ಆಯುರ್ವೇದಾದಿ ಶಾಸ್ತ್ರಗಳಲ್ಲಿ ಯಾವುದು ವಿಹಿತವಲ್ಲ. ಅದು ಅಪಥ್ಯ ಅದು ಅನಾರೋಗ್ಯಕರ ಎಂದು ಒಂದು ಅರ್ಥವಾದರೆ ಯಾವುದು ಉಪನಿಷತ್ತಿನಲ್ಲಿ ವೇದಗಳಲ್ಲಿ ಶ್ರೀಮದಾಚಾರ್ಯರ ಗ್ರಂಥಗಳಲ್ಲಿ ಧರ್ಮ ಶಾಸ್ತ್ರಗಳಲ್ಲಿ ವಿಹಿತವಾಗಿದೆ. ದೇವರಿಗೆ ಸಮರ್ಪಣೆ ಮಾಡಿ ನಂತರವೇ ಆಹಾರವನ್ನು ಸ್ವೀಕಾರ ಮಾಡಬೇಕು ಎಂತ ಅದಕ್ಕೆ ಹೊರತಾಗಿ ಮಾಡಿದರೆ ಅದೂ ಕೂಡ ಹಾದಿಯನ್ನು ಬಿಟ್ಟಂತೆ.