ಸಿವಿಲ್ ನ್ಯಾಯಾಲಯ ಆದೇಶ: ಎಸಿ ಕಚೇರಿ ಪೀಠೋಪಕರಣ ಜಪ್ತಿ

Advertisement

ರಾಯಚೂರು: ಜಿಲ್ಲೆ ಮಾನ್ವಿ ತಾಲೂಕಿನ ದದ್ದಲ್ ಏತ ನೀರಾವರಿ ಹಾಗೂ ರಾಯಚೂರು ತಾಲ್ಲೂಕಿನ ಮಲ್ಲಾಪುರ ಗ್ರಾಮದಲ್ಲಿ ರಸ್ತೆ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡದ್ದಕ್ಕೆ ಇಲ್ಲಿನ ಸಿವಿಲ್ ನ್ಯಾಯಾಲಯ ಆದೇಶದ ಮೇರೆಗೆ ಸಹಾಯಕ ಆಯುಕ್ತರ ಕಚೇರಿ ಆಸ್ತಿ ಜಪ್ತಿ ಮಾಡಿಕೊಂಡ ಪ್ರಸಂಗ ಮಂಗಳವಾರ ನಡೆಯಿತು. ತಾಲೂಕಿನ ಮಾನ್ವಿ ದದ್ದಲ್, ಸುಂಕೇಶ್ವರಹಾಳ, ಮಲ್ಲಾಪುರ ಸೇರಿದಂತೆ ವಿವಿಧ ಗ್ರಾಮಗಳ ರೈತರಿಂದ 2008ರಲ್ಲಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಐದು ಬಾರಿ ಕಚೇರಿ ಸಾಮಗ್ರಿ ಜಪ್ತಿಗೆ ಆದೇಶ ಮಾಡಿದರೂ ಸಹಾಯಕ ಕಚೇರಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು. ಕೊನೆಗೆ ಸಂತ್ರಸ್ತರ ಪರ ವಕೀಲರು ಹಾಗೂ ರೈತರು ಇಂದು ಎಸಿ ಕಚೇರಿಯ ಸಾಮಗ್ರಿಗಳನ್ನು ಜಪ್ತಿಗೆ ಮುಂದಾದರು. ಇದಕ್ಕೆ ಸಹಾಯಕ ಆಯುಕ್ತರು ವಿರೋಧ ವ್ಯಕ್ತಪಡಿಸಿದ್ದಲ್ಲದೇ ಆಕ್ರೋಶ ಹೊರಹಾಕಿದರು. ಆದರೂ ಲೆಕ್ಕಿಸದೆ ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡಿಕೊಂಡು ಕಚೇರಿ ಹೊರಭಾಗ ತಂದಿಡಲಾಯಿತು. ಕೊನೆಗೆ ಎಸಿ ಸಿಟ್ಟಿನಲ್ಲಿ ಕಚೇರಿಯಿಂದ ಹೊರ ನಡೆದರು.

ತಾಜಾ ಸುದ್ದಿಗಾಗಿ, ಸಂಯುಕ್ತ ಕರ್ನಾಟಕ ಆ್ಯಪ್ ಬಳಸಿ: https://play.google.com/store/apps/details?id=com.samyuktakarnataka.app