ಜಾತಿಗಣತಿ ವರದಿ ಇಂದು ಸಲ್ಲಿಕೆ ಸಾಧ್ಯತೆ

Advertisement

ಬೆಂಗಳೂರು: ಸರಿಸುಮಾರು ೯ ವರ್ಷಗಳ ಬಳಿಕ ಕರ್ನಾಟಕ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಜಾತಿಗಣತಿ ವರದಿಯನ್ನು ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಜ.‌ ೩೧ರಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಿದ್ದಾರೆ.
ಸಿಎಂ ಕಚೇರಿಯ ಮೂಲಗಳ ಪ್ರಕಾರ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಹಾಗೂ ಸಿಎಂ ಸಿದ್ದರಾಮಯ್ಯ ಭೇಟಿಗೆ ಬುಧವಾರ ಸಮಯಾ­ವಕಾಶ ನಿಗದಿಯಾಗಿದೆ ಎಂದು ಹೇಳಲಾಗಿದೆ. ಒಂದು ವೇಳೆ ಬುಧವಾರ ವರದಿ ಸಲ್ಲಿಕೆ ಆಗಿದ್ದೇ ಆದಲ್ಲಿ ಫೆಬ್ರವರಿ ೧ರಂದು ನಡೆಯುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ.
ಚರ್ಚೆಯ ಬಳಿಕ ಜಾತಿಗಣತಿ ಬಗ್ಗೆ ಅಧ್ಯಯನ ನಡೆಸಲು ತಜ್ಞರ ಸಮಿತಿ ರಚನೆ ಇಲ್ಲವೇ ಸಚಿವ ಸಂಪುಟ ಉಪ ಸಮಿತಿ ರಚನೆಗೆ ಸಂಪುಟ ಮುಂದಾಗುವ ನಿರೀಕ್ಷೆ ಇದೆ.
ಒಂದು ವೇಳೆ ಬುಧವಾರ ಸಿಎಂ ಸಿದ್ದರಾಮಯ್ಯ ವರದಿ ಪಡೆಯದೇ ಇದ್ದರೆ ರಾಜ್ಯ ಬಜೆಟ್ ಅಧಿವೇಶನದವರೆಗೆ ಹಾಲಿ ಅಧ್ಯಕ್ಷ ಹೆಗ್ಡೆ ಅವರ ಅಧಿಕಾರ ಅವಧಿ ವಿಸ್ತರಿಸಲೂಬಹುದು ಎನ್ನಲಾಗುತ್ತಿದೆ.