ಡಿ.ಕೆ.ಸುರೇಶ್ ವಿರುದ್ಧ ನ್ಯಾಯಾಲಯಕ್ಕೆ ದೂರು

Advertisement

ಮಂಗಳೂರು: ಬೆಂಗಳೂರು ಗ್ರಾಮಾಂತರ ಸಂಸದ ಡಿ. ಕೆ. ಸುರೇಶ್ ವಿರುದ್ಧ ಬಿಜೆಪಿ ಮುಖಂಡ ವಿಕಾಸ್ ಪುತ್ತೂರು ಎಂಬವರು ಮಂಗಳೂರಿನ ಎರಡನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ.
ಕೇಂದ್ರ ಮುಂಗಡಪತ್ರದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಡಿ. ಎಕ. ಸುರೇಶ್, ಪ್ರತ್ಯೇಕ ರಾಷ್ಟ್ರಕ್ಕಾಗಿ ಬೇಡಿಕೆ ಇರಿಸುವ ಕುರಿತು ಮಾತನಾಡಿದ್ದರು.
ಡಿ.ಕೆ.ಸುರೇಶ್ ಅವರು, ನಾವು ಪ್ರತ್ಯೇಕ ರಾಷ್ಟ್ರಕ್ಕಾಗಿ ಬೇಡಿಕೆ ಇಡಬೇಕಾಗುತ್ತದೆ ಎಂಬ ರೀತಿಯಲ್ಲಿ ಪ್ರತ್ಯೇಕವಾದಿ ಮಾನಸಿಕತೆಯನ್ನು ಬಿತ್ತುವ ಪ್ರಚೋದನಕಾರಿ ದೇಶವಿರೋಧಿ ಹೇಳಿಕೆಯನ್ನು
ಸುದ್ದಿಗೋಷ್ಠಿಯಲ್ಲಿ ಇಡೀ ರಾಷ್ಟ್ರಕ್ಕೆ ನೀಡಿದ್ದಾರೆ. ಇದು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಈ ರೀತಿಯ ಹೇಳಿಕೆ ದೇಶದ್ರೋಹಿ, ಭಯೋತ್ಪಾದಕರಿಗೆ ಮತ್ತು ಭಾರತವನ್ನು ತುಂಡರಿಸಬೇಕು ಎಂದು ಷಡ್ಯಂತ್ರ ರೂಪಿಸುವ ಪ್ರತ್ಯೇಕವಾದಿಗಳಿಗೆ ಕುಮ್ಮಕ್ಕು ನೀಡುವ ರೀತಿಯಲ್ಲಿದೆ. ಈ ಹೇಳಿಕೆಯಿಂದ ಅಸಂಖ್ಯಾತ ದೇಶಭಕ್ತರಿಗೆ ಘಾಸಿ ಉಂಟಾಗಿದೆ. ಇದು ಭಾರತೀಯ ದಂಡ ಸಂಹಿತೆಯ ಕಲಂ ೧೨೪ ಎ ಅನ್ವಯ ಅಪರಾಧವಾಗುತ್ತದೆ. ಅಲ್ಲದೆ ದೇಶದ್ರೋಹ ಕಾಯ್ಗೆಯ ಕಲಂಗಳ ಅನ್ವಯ ಹೇಳಿಕೆ ನೀಡಿದ್ದಾರೆ. ಆದ್ದರಿಂದ ಈ ಬಗ್ಗೆ ನ್ಯಾಯಾಲಯ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ ಕಲಂ ೧೫೬(೩) ರನ್ವಯ ಮಂಗಳೂರು ಉತ್ತರ ಪೊಲೀಸ್ ಠಾಣಾಧಿಕಾರಿಗೆ ತನಿಖೆ ಮತ್ತು ವರದಿಗಾಗಿ ಆದೇಶಿಸುವಂತೆ ದೂರುದಾರ ವಿಕಾಸ್ ಪುತ್ತೂರು ದೂರಿನಲ್ಲಿ ವಿನಂತಿಸಿದ್ದಾರೆ.
ಈ ಬಗ್ಗೆ ನ್ಯಾಯಾಲಯ ಫೆ.೭ರಂದು ತೀರ್ಮಾನಿಸುವುದಾಗಿ ತಿಳಿಸಿದೆ ಎಂದು ವಿಕಾಸ್ ಪುತ್ತೂರು ತಿಳಿಸಿದ್ದಾರೆ. ಅರ್ಜಿದಾರರ ಪರ ವಕೀಲ ಮೋಹನರಾಜ್ ಕೆ.ಆರ್., ಬಿಜೆಪಿ ಯುವ ಮುಖಂಡ ಗುರುಚರಣ್ ಇದ್ದರು.