ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸಂಘ ರಚನೆಗೆ ಗಡುವು

Advertisement

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಈ ಹಿಂದೆ ವ್ಯಾಸಂಗ ಮಾಡಿರುವ ಹಳೆ ವಿದ್ಯಾರ್ಥಿಗಳನ್ನು ಗುರುತಿಸಿ ಶಾಲೆಯ ಪಾರಂಪರಿಕ ಹಿನ್ನೆಲೆಯೊಂದಿಗೆ ಭಾವನಾತ್ಮಕ ಸಂಬಂಧ ಬೆಸೆಯಲು ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಹಳೆ ವಿದ್ಯಾರ್ಥಿಗಳ ಸಂಘ (ALUMNI ASSOCIATION)ವನ್ನು ಮಾರ್ಚ್ ೩೧ರ ಒಳಗಾಗಿ ರಚಿಸಬೇಕೆಂದು ಸೂಚಿಸಲಾಗಿದೆ.
ಸಂಘದ ಮುಖಾಂತರ ಶಾಲೆಯನ್ನು ಶೈಕ್ಷಣಿಕವಾಗಿ ಮತ್ತಷ್ಟು ಬಲವರ್ಧನೆಗೊಳಿಸಲು ಅಗತ್ಯವಿರುವ ಗ್ರಂಥಾಲಯ, ಪ್ರಯೋಗಾಲಯ, ಕ್ರೀಡಾಲಯ, ಪೀಠೋಪಕರಣಗಳು, ಪಾಠೋಪಕರಣಗಳು, ವಿಜ್ಞಾನ ಉಪಕರಣಗಳು, SMART CLASS E-ಕಲಿಕಾ ಕೇಂದ್ರ ಸ್ಥಾಪನೆಯಂತಹ ಪರಿಣಾಮಕಾರಿ ಸೌಲಭ್ಯಗಳ ಪೂರೈಕೆ ಹಾಗೂ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಅವಶ್ಯಕತೆಗನುಗುಣವಾಗಿ ಆದ್ಯತಾನುಸಾರ ಸದರಿ ದಾನಿಗಳ (ಹಳೆ ವಿದ್ಯಾರ್ಥಿಗಳ ಸಂಘದ) ಸಹಕಾರದಿಂದ ಪೂರೈಸಿಕೊಳ್ಳಲು ಅನುವಾಗುವಂತೆ ಕ್ರಿಯಾ ಯೋಜನೆಯನ್ನು ರೂಪಿಸಿಕೊಂಡು ‘ನಮ್ಮ ಶಾಲೆ ನಮ್ಮ ಜವಬ್ದಾರಿ’ ಕಾರ್ಯಕ್ರಮದಡಿ ಅನುಷ್ಠಾನ ಮಾಡಲು ತಿಳಿಸಲಾಗಿದೆ.