ಅಡುಗೆ ಸಹಾಯಕರ ಸೋದರನಿಂದ ಬೆದರಿಕೆ: ಪೊಲೀಸ್ ಠಾಣೆ ಮೆಟ್ಟಲೇರಿದ ವಿದ್ಯಾರ್ಥಿಗಳು

Advertisement

ಕುಷ್ಟಗಿ: ಹಾಸ್ಟೆಲ್ ಅಡಿಗೆದಾರರು ಶುಚಿ – ರುಚಿಯಾಗಿ ಅಡುಗೆ ಮಾಡುತ್ತಿಲ್ಲ ಹೀಗಾಗಿ ತಿಳಿಸಿ ಸರಿಪಡಿಸುವಂತೆ ಅಡುಗೆ ಸಹಾಯಕ
ನಾನ ಕಟ್ಟಿಮನಿ ಗೆ ವಿದ್ಯಾರ್ಥಿಗಳು ಮನವಿ ಮಾಡಿಕೊಂಡರೆ ಅಡುಗೆ ಸಹಾಯಕನ ಸೋದರಿನಿಂದ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿಸಿದ್ದಾರೆ ಎಂದು ಆರೋಪಿಸಿ ೪೦ ವಿದ್ಯಾರ್ಥಿಗಳು ರಕ್ಷಣೆ ನೀಡುವಂತೆ ಪೊಲೀಸ್ ಠಾಣೆಯ ಮೆಟ್ಟಲೇರಿದ ಪ್ರಸಂಗ ಜರುಗಿದೆ.

ಪಟ್ಟಣದ ಹನಮಸಾಗರ ರಸ್ತೆಯ ಪಕ್ಕದಲ್ಲಿ ಇರುವ ಪರಿಶಿಷ್ಟ ವರ್ಗದ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ವಿದ್ಯಾರ್ಥಿ ನಿಲಯದಲ್ಲಿರುವಂತಹ ಸಮಸ್ಯೆ ಬಗ್ಗೆ ಎಳೆಎಳೆಯಾಗಿ ಪಿಎಸ್ ಐ ಮುದ್ದುರಂಗಸ್ವಾಮಿ
ಬಿಚ್ಚಿಟ್ಟರು.ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಅಡುಗೆ ಸಹಾಯಕ ನಾನ ಕಟ್ಟಿಮನಿ ಅವರಿಗೆ ಅಡುಗೆದಾರರು ಸರಿಯಾಗಿ ಅಡುಗೆ ರುಚಿಕಟ್ಟಾಗಿ ಮಾಡುತ್ತಿಲ್ಲ ಹೀಗಾಗಿ ಅಡುಗೆ ಸರಿಪಡಿಸುವಂತೆ ತಿಳಿಸಿದ ವಿದ್ಯಾರ್ಥಿಗಳಿಗೆ ನಾನು ಕಟ್ಟಿಮನಿ ಅವರು ವಿದ್ಯಾರ್ಥಿಗಳ ಮೊಬೈಲ್ ನಂಬರ್ ಸಂಗ್ರಹಿಸಿ ತಮ್ಮ ಸೋದರನಿಗೆ ಮೊಬೈಲ್ ನಂಬರ್ ನೀಡಿ ಬೆದರಿಕೆ ಹಾಕಿಸಿದ್ದಾನೆ.ಹೊರಗಡೆಯ ವ್ಯಕ್ತಿಗಳು ಹಾಸ್ಟೆಲಿಗೆ ಬಂದು ವಿದ್ಯಾರ್ಥಿಗಳನ್ನು ಹುಡುಕಾಟ ಮಾಡುತ್ತಿದ್ದಾರೆ.ನಮಗೆ ವಸತಿ ನಿಲಯದಲ್ಲಿ ಯಾವುದೇ ರೀತಿ ಸುರಕ್ಷತೆ ಇರುವುದಿಲ್ಲ.ವಸತಿ ನಿಲಯದ ಸಹಾಯಕನ ಸೋದರ ಬೆದರಿಕೆ ಹಾಕಿರುವುದರಿಂದ ನಿಲಯದಲ್ಲಿ ಇರಬೇಕಾದರೆ ಭಯದ ವಾತಾವರಣ ಸೃಷ್ಟಿಯಾಗಿದೆ ಇದರಿಂದ ಅದೆಷ್ಟು ವಿದ್ಯಾರ್ಥಿಗಳು ರಜೆ ಮೇಲೆ ಊರಿಗೆ ತೆರಳಿದ್ದಾರೆ,ಈ ಎಲ್ಲಾ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸರಿಯಾಗಿವೆ ಎಂದು ವಿದ್ಯಾರ್ಥಿಗಳು ಪೊಲೀಸರ ಮುಂದೆ ಸಮಸ್ಯೆ ತೋಡಿಕೊಂಡರು.

ಪಿಎಸೈ ಮುದ್ದುರಂಗಸ್ವಾಮಿ ಅವರಲ್ಲಿ ವಾಸ್ತವ ಸ್ಥಿತಿ ಗಮನಕ್ಕೆ ತಂದ ವಿದ್ಯಾರ್ಥಿಗಳಿಗೆ ಪಿಎಸೈ ಮುದ್ದುರಂಗಸ್ವಾಮಿ ಅವರು, ಅಭಯ ನೀಡಿದ್ದಾರೆ. ವಿದ್ಯಾರ್ಥಿಗಳಿಗೆ ಹಾಗೂ ಅಡುಗೆಯವರಿಗೆ, ಅಡುಗೆ ಸಹಾಯಕರಿಗೆ ಪರಿಶಿಷ್ಟ ವರ್ಗ ಕಲ್ಯಾಣ ಆಧಿಕಾರಿಯ ಸಮ್ಮುಖದಲ್ಲಿ ಬುದ್ದಿವಾದ ಹೇಳಿ ಕಳುಹಿಸಿದ್ದಾರೆ.