ಕಾಂಗ್ರೆಸ್ ಕಚೇರಿಯಲ್ಲಿ ರಾತ್ರಿ ಕಳೆದ ಶರ್ಮಿಳಾ

Advertisement

ವಿಜಯವಾಡ: ಕಾಂಗ್ರೆಸ್‌ನ ಆಂಧ್ರಪ್ರದೇಶ ಘಟಕದ ಅಧ್ಯಕ್ಷೆ ವೈ.ಎಸ್.ಶರ್ಮಿಳಾ ಬುಧವಾರ ರಾತ್ರಿ ಪಕ್ಷದ ಕಚೇರಿಯಲ್ಲಿ ಉಳಿಯವ ಮೂಲಕ ತಮ್ಮನ್ನು ಗೃಹಬಂಧನದಲ್ಲಿಡುವ ಜಗನ್ ರೆಡ್ಡಿ ಸರ್ಕಾರದ ತಂತ್ರವನ್ನು ವಿಫಲಗೊಳಿಸಿದ್ದಾರೆ.
ಶಿಕ್ಷಕರ ನೇಮಕಾತಿಗೆ ಜಿಲ್ಲಾ ಆಯ್ಕೆ ಸಮಿತಿ ಕುರಿತ ಅಧಿಸೂಚನೆ ವಿರೋಧಿಸಿ ಅವರು ಗುರುವಾರ ಚಲೋ ಸೆಕ್ರೆಯೆಟ್ ಪ್ರತಿಭಟನೆಗೆ ಕರೆ ನೀಡಿದ್ದರು. ಈ ಪ್ರತಿಭಟನೆಯನ್ನು ವಿಫಲಗೊಳಿಸುವ ಪ್ರಯತ್ನವಾಗಿ ಜಗನ್ ಸರ್ಕಾರ ಶರ್ಮಿಳಾರನ್ನು ಗೃಹಬಂಧನದಲ್ಲಿಡಲು ಮುಂದಾಗಿತ್ತು. ಈ ಮಾಹಿತಿ ಅರಿತ ಕೂಡಲೇ ಆಕೆ ಇಲ್ಲಿನ ಪಕ್ಷದ ಕಚೇರಿಯಲ್ಲಿ ರಾತ್ರಿ ಕಳೆದರು. ಆದರೆ ಈ ಕಾಂಗ್ರೆಸ್ ಕಚೇರಿ ಸುತ್ತಲೂ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಿರುವುದಲ್ಲದೆ, ಬ್ಯಾರಿಕೇಡ್‌ಗಳನ್ನೂ ನಿಯೋಜಿಸಲಾಗಿತ್ತು.
ಗುರುವಾರ ಬೆಳಗ್ಗೆ ಶರ್ಮಿಳಾ ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಪಕ್ಷದ ಕೇಂದ್ರಕಚೇರಿಯಿಂದ ಚಲೋ ಸೆಕ್ರೆಯೆಟ್ ಪ್ರತಿಭಟನೆ ಆರಂಭಿಸಿದರು. ಆದರೆ ಎಲೂರು ರಸ್ತೆಯಲ್ಲಿ ಸರ್ಕಾರಿ ಘೋಷಣೆ
ಕೂಗುತ್ತಾ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಶರ್ಮಿಳಾ ಮತ್ತವರ ಜೊತೆಗಿದ್ದ ೪೦ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.