ಏರ್‌ಇಂಡಿಯಾಗೆ ೩೦ ಲಕ್ಷ ರೂ. ದಂಡ

Advertisement

ಮುಂಬೈ: ೮೦ ವರ್ಷದ ಹಿರಿಯ ನಾಗರಿಕರಿಗೆ ಗಾಲಿ ಕುರ್ಚಿ ಒದಗಿಸದ ಏರ್ ಇಂಡಿಯಾಗೆ ನಾಗರಿಕ ವಾಯುಯಾನ ನಿರ್ದೇಶನಾಲಯ ಈಗ ೩೦ ಲಕ್ಷ ರೂ. ಲಕ್ಷ ರೂ. ದಂಡ ವಿಧಿಸಿದೆ. ಫೆ. ೧೨ರಂದು ನ್ಯೂಯಾರ್ಕ್ನಿಂದ ಮುಂಬೈಗೆ ಬಂದಿದ್ದ ಅವರು ವಿಮಾನದಿಂದ ಇಳಿದು ಟರ್ಮಿನಲ್‌ಗೆ ಬರಲು ಗಾಲಿ ಕುರ್ಚಿ ಕೇಳಿದ್ದರು. ಆದರೆ ತಕ್ಷಣವೇ ಗಾಲಿ ಕುರ್ಚಿ ಪೂರೈಸುವಲ್ಲಿ ಏರ್ ಇಂಡಿಯಾ ವಿಫಲವಾಗಿದೆ. ಈ ವೃದ್ಧರ ಪತ್ನಿಗೆ ಗಾಲಿ ಕುರ್ಚಿ ಒದಗಿಸಲಾಗಿತ್ತು. ಆದರೆ ಗಾಲಿ ಕುರ್ಚಿಗಳು ತಕ್ಷಣವೇ ಲಭ್ಯವಿಲ್ಲದ ಕಾರಣ ತುಸು ಕಾಯುವಂತೆ ವೃದ್ಧರಲ್ಲಿ ಮನವಿ ಮಾಡಲಾಗಿತ್ತು. ಆದರೂ ಆತ ಗಾಲಿಕುರ್ಚಿಯಲ್ಲಿ ವಲಸೆ ವಿಭಾಗಕ್ಕೆ ತೆರಳುತ್ತಿದ್ದ ಪತ್ನಿ ಜೊತೆ ಹೋಗಿದ್ದರು. ದಾರಿ ಮಧ್ಯೆ ತೀವ್ರ ಅಸ್ವಸ್ಥರಾಗಿ ಅವರು ಸಾವಿಗೀಡಾದರು ಎಂದು ಏರ್ ಇಂಡಿಯಾ ವಿವರಿಸಿದೆ.