ಎಸಿಸಿ ಕಾರ್ಖಾನೆ ಕಿರುಕುಳದಿಂದ ಸಿಡಿದೆದ್ದ ಕಾರ್ಮಿಕರು..!

Advertisement

ವಾಡಿ: ಸ್ಥಳೀಯ ಎಸಿಸಿ ಸಿಮೆಂಟ್ ಕಾರ್ಖಾನೆಯಲ್ಲಿ ದುಡಿಯುತ್ತಿರುವ ಗುತ್ತಿಗೆ ಕಾರ್ಮಿಕರು ಆಡಳಿತ ಮಂಡಳಿ ನೀಡುತ್ತಿರುವ ಕಿರುಕುಳದಿಂದ ಸಿಡಿದೆದ್ದು ಕೆಲಸ ಬಹಿಷ್ಕರಿಸಿ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಸೋಮವಾರ ಬೆಳಗ್ಗೆ ನಡೆಯಿತು.

ಬೆಳಿಗ್ಗೆ 09ರಿಂದ ಸಾಯಂಕಾಲ 6 ಗಂಟೆವರೆಗೆ ಕೆಲಸ ಮಾಡುವಂತೆ ಎಸಿಸಿ ಆಡಳಿತ ಮಂಡಳಿ ಒತ್ತಡ ಹಾಕುತ್ತಿದೆ. ಮೊದಲು 8ಗಂಟೆಯಿಂದ 4.ಗಂಟೆವರೆಗೆ ಇದ್ದ ಸಮಯವನ್ನು ಸದ್ಯ ಬದಲಾವಣೆ ಮಾಡುವ ಮೂಲಕ ನಮ್ಮ ಗೋಳಾಟಕ್ಕೆ ಕಾರಣರಾಗಿದ್ದಾರೆ. ಅದಾನಿ ಮಾಲಿಕತ್ವ ಆಡಳಿತಕ್ಕೆ ಬಂದ ಮೇಲೆ ಕಾರ್ಮಿಕರಿಗೆ ಕಿರುಕುಳ ಹೆಚ್ಚಾಗಿ ನಮ್ಮ ಬದುಕು ನರಕಯಾತನೆ ಅನುಭವಿಸುತ್ತಿದ್ದೇವೆ ಎಂದು ಕಾರ್ಮಿಕರು ಅಸಮಾದಾನ ಹೊರ ಹಾಕಿದ್ದಾರೆ.
ಎಂಟು ಗಂಟೆ ಎಂಟು ಗಂಟೆ ಎದ್ದ ಕೆಲಸದ ಅವಧಿಯನ್ನು ಒಂಬತ್ತು ಗಂಟೆಗೆ ಹೆಚ್ಚಿಸಲಾಗಿದೆ. ಊಟ ಹಾಗೂ ವಿಶ್ರಾಂತಿಗು ಅವಕಾಶ ನೀಡದೆ ದುಡಿಯಲು ಹೇಳುತ್ತಿದ್ದು ವಿಶ್ರಾಂತಿ ಇಲ್ಲದೆ ಕೆಲಸ ಮಾಡಲು ನಾವೇನು ಯಂತ್ರಗಳೇ ಎಂದು ಕಾರ್ಮಿಕರು ಪ್ರಶ್ನಿಸಿದ್ದಾರೆ. ಮೊದಲಿನ 8: ಕೆಲಸದ ಅವಧಿ ನಿಗದಿಪಡಿಸಬೇಕು ಓಟಿ ನೀಡಬೇಕು ಊಟ ಹಾಗೂ ವಿಶ್ರಾಂತಿಗೆ ಹೆಚ್ಚಿನ ಸಮಯ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದು ಅಧಿಕಾರಿಗಳು ಬಂದು ಕೇಳುವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ತಿಳಿಸಿದ್ದಾರೆ.