ಮುಸ್ಸಂಜೆಯ ವಿಶಿಷ್ಟ ಪ್ರಾರ್ಥನೆ… ಅಸರ್

Advertisement

ಜಗತ್ತಿನಲ್ಲಿ ಒಂದಿಲ್ಲ ಒಂದು ಕಡೆ ಬೆಳಗು ಆಗುತ್ತಲೇ ಇರುತ್ತದೆ. ಸೂರ್ಯನ ರಥ ಇಳಿಜಾರಿಗೆ ಬಿದ್ದಂತಾಗಿ ಹಿಂದೆ ಹೋಗುತ್ತಿರುವ ಹಗಲು ಕಣ್ಮರೆಯಾಗುತ್ತಿರುವಾಗ ಮೆಲ್ಲನೆ ಕತ್ತಲು ಕಾಲಿಡಲು ಪ್ರಾರಂಭಿಸುತ್ತದೆ. ಹಗಲಿನ ನಿರ್ಗಮನ ಕತ್ತಲಿನ ಆಗಮನ ಇವೆರಡರ ನಡುವಿನ ಪ್ರಕ್ರಿಯೆಗೆ ಮುಸ್ಸಂಜೆ ಎಂತಲೂ ಕರೆಯಲಾಗಿದೆ. ಮುಸ್ಸಂಜೆ ಬರುತ್ತಿದ್ದಂತೆ ಪ್ರಕೃತಿಯ ಅಗಲುವಿಕೆ. ಏನೋ ಕಳೆದು ಹೋಗುತ್ತಿರುವ ವಾತಾವರಣ ಆವರಿಸತೊಡಗುತ್ತದೆ. ಪ್ರಕೃತಿಯ ಮಗುವಾದ ಮಾನವನಲ್ಲಿಯು ಈ ಭಯ ಕಾಣಿಸತೊಡಗುತ್ತದೆ. ಇಂತಹ ಸ್ಥಿತಿಯಲ್ಲಿ ವಿವಿಧ ಧರ್ಮಗಳು ಮುಸ್ಸಂಜೆಯ ಪ್ರಾರ್ಥನೆಯನ್ನು ಪ್ರತಿಪಾದಿಸಿ ಮನುಷ್ಯನನ್ನು ಇಂತಹ ಅಗಲುವಿಕೆಯ ಭಯದಿಂದ ಮುಕ್ತನನ್ನಾಗಿ ಮಾಡಿವೆ ಅಂತಹ ಪ್ರಾರ್ಥನೆಗಳಲ್ಲಿ ಇಸ್ಲಾಮಿನ ಮುಸ್ಸಂಜೆಯ ಪ್ರಾರ್ಥನೆ ಅಸರ್' ಒಂದು. ದಿನದ ೫ ಪ್ರಾರ್ಥನೆಗಳಲ್ಲಿ ಇಸ್ಲಾಂ ನಡುವಿನ ಪ್ರಾರ್ಥನೆ ಅಸರ್ ಹೆಚ್ಚು ಪ್ರಾಶಸ್ತ್ಯ ನೀಡಿದೆ. ಕುರಾನಿನಲ್ಲಿ ಪ್ರಾರ್ಥನೆಯ ಅಧ್ಯಾಯ ಬಕರ್ (೯- ೨೩೮) ರಲ್ಲಿನಮಾಜ್ ಅನ್ನು ಎಚ್ಚರಿಕೆಯಿಂದ ಪಾಲಿಸಿರಿ. ವಿಶೇಷವಾಗಿ ಮಧ್ಯದ ನಮಾಜ್ ಅನ್ನು ಪಾಲಿಸಿರಿ’ ಎಂದು ಆಜ್ಞಾಪಿಸಲಾಗಿದೆ. ಇದರಂತೆ ಇತರ ಅಧ್ಯಾಯಗಳ (೬:೧೮, ೨೦, :೩) ಶ್ಲೋಕಗಳಲ್ಲಿ ಅಸರ್' ಪ್ರಾರ್ಥನೆಯನ್ನು ಕಡ್ಡಾಯಗೊಳಿಸಲಾಗಿದೆ. ಮೊದಲ ಪುರುಷ ಆದಮ್ ಅಲ್ಲಾಹನ ಆಜ್ಞೆಯನ್ನು ಉಲ್ಲಂಘಿಸಿದ್ದು ನಂತರ ಅವರನ್ನು ಸ್ವರ್ಗದಿಂದ ಹೊರಗೆ ಹಾಕಿ ಭೂಮಿಗೆ ಕಳುಹಿಸಿದ್ದು ಹಾಗೂ ಹಜರತ್ ಯೂನೂಸ್ಟರನು ಬೃಹತ್ ಗಾತ್ರದ ಮೀನಿನ ಹೊಟ್ಟೆಯಲ್ಲಿದ್ದಾಗ ಅಲ್ಲಾಹನನ್ನು ಸ್ತುತಿಸಿದ್ದು ಮುಂತಾದ ಘಟನೆಗಳು ಮುಸ್ಸಂಜೆಯ ಸಮಯದಲ್ಲಿ ನಡೆದವು. ಈ ಸಮಯದಲ್ಲಿ ದೇವರ ಧ್ಯಾನ ಮಾಡಿದರೆ ಗೋರಿಯಲ್ಲಾಗುವೆ ಎಲ್ಲ ಮರೆತು ಬಿಡಬಹುದು. ಮುಂತಾಗಿ ಇಸ್ಲಾಮಿನ ವಿದ್ವಾಂಸರು ಮುಸ್ಸಂಜೆ ಪ್ರಾರ್ಥನೆಯ ಮಹತ್ವವನ್ನು ವಿವರಿಸುತ್ತಾರೆ. ರಂಜಾನ್ ತಿಂಗಳ ಉಪವಾಸ ವೃತದಲ್ಲಿದ್ದಾಗ ಈ ಪ್ರಾರ್ಥನೆಗೆ ಹೆಚ್ಚು ಮಹತ್ವ ನೀಡಲಾಗಿದೆ.ಅಸರ್ ಪ್ರಾರ್ಥನೆಯನ್ನು ಕುರಾನಿನಲ್ಲಿ `ಸಲಾತ್-ಉಲ್-ಮಸ್ರಾ’ ಅಂದರೆ ಮಧ್ಯದ ಪ್ರಾರ್ಥನೆ. ಈ ಪ್ರಾರ್ಥನೆಯನ್ನು ತಪ್ಪದೆ ಮಾಡಲು ಕುರಾನಿನಲ್ಲಿ ಆಜ್ಞಾಪಿಸಲಾಗಿದೆ. ಪ್ರವಾದಿವರ್ಯ (ಸ) ಅವರು ಈ ಪ್ರಾರ್ಥನೆ ಮಾಡದಿರುವುದೆಂದರೆ ಕುಟುಂಬ ಸಂಪತ್ತನ್ನು ಕಳೆದುಕೊಂಡಂತೆ (೨೮) ಎನ್ನುತ್ತಾರೆ.
ಅಸರ್ ಪ್ರಾರ್ಥನೆಯ ಪ್ರಮುಖ ಪ್ರಯೋಜನಗಳೆಂದರೆ ಅದು ಮನುಷ್ಯನ ಮನಸ್ಸನ್ನು ಗಟ್ಟಿಗೊಳಿಸುತ್ತದೆ. ಇಂತಹ ಸ್ಥಿತಿಯಲ್ಲಿ ಮಾನವನು ನನ್ನನ್ನು ಸ್ಮರಿಸಿದರೆ ಖಂಡಿತವಾಗಿ ನಾನು ಅವನ ಹತ್ತಿರ ಇರುತ್ತೇನೆ. ನಾನು ಅವನ ಪ್ರಾರ್ಥನೆಗೆ ಉತ್ತರಿಸುತ್ತೇನೆ. (೨:೧೮೬) ಎಂಬ ದೇವರ ಅಭಯವಿದೆ. ಇದರಿಂದ ಈ ಪ್ರಾರ್ಥನೆ ಮಾನವನಿಗೆ ಉದಾತ್ತ ಜೀವನದ ಮಾರ್ಗ ತೋರಿಸುತ್ತದೆ. ಇದರಿಂದ ಅವನ ಜೀವನ ಶಿಸ್ತು ಹಾಗೂ ಸಂಘಟಿತವಾಗುತ್ತದೆ. ಅವನಿರುವ ಸಮಾಜದಲ್ಲಿ ಸಹನೆ, ಸಹಬಾಳುವೆ ಪಸರಿಸುತ್ತದೆ.