ಹುಬ್ಬಳ್ಳಿ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ 39 ಅಭ್ಯರ್ಥಿಗಳ ಹೆಸರನ್ನು ತನ್ನ ಮೊದಲ ಪಟ್ಟಿಯಲ್ಲಿ ಬಿಡುಗಡೆ ಮಾಡಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇರಳದ ವಯನಾಡಿನಿಂದ, ಶಶಿ ತರೂರ್ ತಿರುವನಂತಪುರಂ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಇನ್ನು ಕಾಂಗ್ರೆಸ್ ತನ್ನ ಮೊದಲ ಪಟ್ಟಿಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ಪತ್ನಿ ಗೀತಾ ಶಿವರಾಜಕುಮಾರ ಸೇರಿದಂತೆ ಕರ್ನಾಟಕದ 7 ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳನ್ನ ಘೋಷಿಸಿದೆ.
- ತುಮಕೂರು: ಮುದ್ದಹನುಮೇಗೌಡ
- ಶಿವಮೊಗ್ಗ: ಗೀತಾ ಶಿವರಾಜ್ ಕುಮಾರ್
- ಹಾಸನ: ಶ್ರೇಯಸ್ ಪಟೇಲ್
- ವಿಜಯಪುರ: ರಾಜು ಆಲಗೂರು
- ಮಂಡ್ಯ: ವೆಂಕಟರಮಣೇಗೌಡ (ಸ್ಟಾರ್ ಚಂದ್ರು)
- ಬೆಂಗಳೂರು ಗ್ರಾಮಾಂತರ: ಡಿಕೆ ಸುರೇಶ್
- ಹಾವೇರಿ: ಆನಂದ್ಸ್ವಾಮಿ ಗಡ್ಡದೇವರಮಠ