ರಾಹುಲ್ ಗಾಂಧಿಗೆ ಟಿಪ್ಪು, ಕುವೆಂಪು ಪುಸ್ತಕ ಕೊಡುಗೆ

ರಾಹುಲ್ ಗೆ ಟಿಪ್ಪು, ಕುವೆಂಪು ಪುಸ್ತಕ
Advertisement

ಮಂಡ್ಯ: ನಾಗಮಂಗಲ ವಕೀಲರು ರಾಹುಲ್ ಗಾಂಧಿಗೆ ವಿಶೇಷ ಉಡುಗೊರೆ ನೀಡಿದರು.
ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ ಫೋಟೊ ಜೊತೆಗೆ ಟಿಪ್ಪು ಸುಲ್ತಾನ್, ಕುವೆಂಪು ಪುಸ್ತಕ ಕೊಟ್ಟು ಭಾವೈಕ್ಯತೆ ಸಾರಿದ್ದಾರೆ. ರಾಹುಲ್ ಗಾಂಧಿ ನಾಗಮಂಗಲಕ್ಕೆ ಪ್ರವೇಶಿಸುತ್ತಿದ್ದಂತೆ ಭಾರತ್ ಜೋಡೋ ಯಾತ್ರೆ ಕೀ ಜೈ, ರಾಹುಲ್ ಗಾಂಧಿ ಕೀ ಜೈ ಎಂದು ಜೈಕಾರಗಳು ಮೊಳಗಿದವು. ಜನಸಾಗರದತ್ತ ಕೈ ಬೀಸುತ್ತಾ ಪಾದಯಾತ್ರೆಯಲ್ಲಿ ರಾಹುಲ್ ಮುನ್ನಡೆಯುತ್ತಿದ್ದರು. ಪೊಲೀಸರು ಎರಡೂ ಕಡೆ ಹಗ್ಗ ಹಿಡಿದುಕೊಂಡು ಸಾರ್ವಜನಿಕರನ್ನು ನಿಯಂತ್ರಿಸುತ್ತಾ ಪಾದಯಾತ್ರೆ ಸುಗಮವಾಗಿ ನಡೆಯುವುದಕ್ಕೆ ನೆರವಾದರು.
ರಾಹುಲ್ ಜೊತೆ ಹೆಜ್ಜೆ ಹಾಕಿದ ಮಕ್ಕಳು….
ಮಾರ್ಗ ಮಧ್ಯೆದಲ್ಲಿ ಬರುವ ಹಳ್ಳಿಗಳ ಜನತೆ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಕಾಂಗ್ರೆಸ್ ಯುವರಾಜ ರಾಹುಲ್‌ ಗಾಂಧಿಯವರನ್ನು ನೋಡಲು ಮುಗಿಬಿದ್ದರು. ಈ ವೇಳೆ ವೃದ್ಧರು, ಮಹಿಳೆಯರನ್ನು ಕಂಡ ರಾಹುಲ್ ಅವರನ್ನು ತಮ್ಮ ಬಳಿಗೆ ಕರೆದು ಮಾತನಾಡಿಸಿ ಮುನ್ನಡೆದರು. ಕೆಲ ಯುವತಿಯರು ರಾಹುಲ್‌ರೊಂದಿಗೆ ಹೆಜ್ಜೆಹಾಕಿ ಸೆಲ್ಫಿ ಗಿಟ್ಟಿಸಿಕೊಂಡರು. ಮತ್ತೆ ಕೆಲವರು ತಮ್ಮ ಪುಟ್ಟ ಮಕ್ಕಳೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡು ರಾಹುಲ್ ಜೊತೆಗೆ ತಮ್ಮ ಮೊಬೈಲ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡರು. ನಗು ನಗುತ್ತಲೇ ಅವರ ಹೆಗಲ ಮೇಲೆ ಕೈ ಹಾಕಿ ಸೆಲ್ಫಿ ನೀಡಿದ ರಾಹುಲ್ ಅವರನ್ನೂ ತಮ್ಮೊಡನೆ ಕರೆದುಕೊಂಡು ಪಾದಯಾತ್ರೆ ಮುಂದುವರಿಸಿದ್ದು ವಿಶೇಷ.
ಪುಟ್ಟ ಮಕ್ಕಳಿಗೆ ಚಾಕೋಲೇಟ್ ನೀಡಿದ ರಾಹುಲ್ ಗಾಂಧಿ, ಮಕ್ಕಳ ಕೆನ್ನೆ ಸವರಿ, ಮೈದಡವಿ ಮುನ್ನಡೆಯುತ್ತಿದ್ದರು. ಮೂರ್ನಾಲ್ಕು ಕಿ.ಮೀ. ದೂರದವರೆಗೆ ಜನರು ಪಾದಯಾತ್ರೆಯಲ್ಲಿ ನಡೆದರು.