ಜಗತ್ತಿನ ಯಾವ ಶಕ್ತಿಗೂ ಸಂವಿಧಾನ ಬದಲಿಸಲು ಸಾಧ್ಯವಿಲ್ಲ

ಸಿ.ಟಿ. ರವಿ
Advertisement

ಚಿಕ್ಕಮಗಳೂರು: ಜಗತ್ತಿನ ಯಾವ ಶಕ್ತಿಗೂ ಸಂವಿಧಾನ ಬದಲಿಸಲು ಸಾಧ್ಯವಿಲ್ಲ, ಭಾರತ ಸಾರ್ವಭೌಮ ರಾಷ್ಟ್ರ, ಸಂವಿಧಾನ ಬದಲಿಸುವ ಪ್ರಶ್ನೆಯೇ ಇಲ್ಲ. ತಿದ್ದುಪಡಿ ಮಾಡಲು ಸಂವಿಧಾನವೇ ಅವಕಾಶ ಕೊಟ್ಟಿದೆ ಎಂದು ಮಾಜಿ ಸಚಿವ ಸಿ.ಟಿ. ರವಿ ಅವರು ಹೇಳಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ವಿಭಜನೆಗೂ ಮುನ್ನ ಕಾಂಗ್ರೆಸ್ಸಿಗರ ಶೌರ್ಯವನ್ನ ಕಂಡಿದ್ದೇವೆ, ನನ್ನ ದೇಹ ತುಂಡಾದರೂ ದೇಶ ತುಂಡಾಗಲು ಬಿಡುವುದಿಲ್ಲ ಎಂದಿದ್ದರು, ತುಂಡು ಮಾಡ್ತೀವಿ ಅನ್ನೋರ್ನ ಕತ್ತರಿಸಿ ದೇಶ ಉಳಿಸ್ತೀವಿ ಎಂದಿದ್ದರು, ದೇಶ ತುಂಡು ಮಾಡಲು ಕಾಂಗ್ರೆಸ್ಸಿಗರೇ ಹೋಗಿ ಸಹಿ ಹಾಕಿದ್ರು, ಕಾಂಗ್ರೆಸ್ಸೇ 95ಕ್ಕೂ ಹೆಚ್ಚು ಬಾರಿ ಸಂವಿಧಾನ ತಿದ್ದುಪಡಿ ಮಾಡಿದೆ ಎಂದರು.
ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ವಿಪಕ್ಷ ನಾಯಕರನ್ನು ಜೈಲಲ್ಲಿಟ್ಟು ಕಾಂಗ್ರೆಸ್ಸೇ 30 ಬಾರಿ ತಿದ್ದುಪಡಿ ಮಾಡಿದೆ ಎಂದ ಅವರು, ಸಂವಿಧಾನ ಆಚರಣೆ ದಿವಸ್ ಜಾರಿಗೆ ತಂದಿದ್ದೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸಿಗರು ಅದನ್ನು ಕಾನೂನಿನ ದಿನ ಎಂದು ಕರೆಯುತ್ತಿದ್ದರು.ಕಾಂಗ್ರೆಸ್ ಅಂಬೇಡ್ಕರ್ ಹಾಗೂ ಸಂವಿಧಾನ ಎರಡಕ್ಕೂ ಅಪಚಾರ ಎಸಗಿದೆ. ಆದರೆ, ಬಿಜೆಪಿ ಸಂವಿಧಾನ ಹಾಗೂ ಅಂಬೇಡ್ಕರ್ ವಿಚಾರಧಾರೆಗೆ ಬಲ ಕೊಡುವ ಕೆಲಸ ಮಾಡಿದೆ ಎಂದರು.
ಫೇಕ್ ನ್ಯೂಸ್‌ವನ್ನು ಕಳೆದ ವಿಧಾನ ಸಭಾ ಚುನಾವಣೆಯಲ್ಲೂ ಬಿಟ್ಟಿದ್ರು, ಈಗ ಮತ್ತೆ ಚುನಾವಣೆ ಬಂದಾಗ ಕಾಂಗ್ರೆಸ್‌ ಫೇಕ್ ನ್ಯೂಸ್ ಫ್ಯಾಕ್ಟರಿ ಚಾಲನೆ ಮಾಡುತ್ತೆ. ಇವೆಲ್ಲವೂ ಸಿಎಂ ಸಿದ್ದರಾಮಯ್ಯ ಕೃಪಾಪೋಷಿತ ನಾಟಕ ಮಂಡಳಿಯಿಂದ ಬಿಡ್ತಿರೋದು ಸಂವಿಧಾನ ತಿದ್ದುಪಡಿಯನ್ನು ಬದಲಾವಣೆ ಎಂದು ತುರುಕುತ್ತಿರೋದು ಇವರೇ ಸಂಸದ ಅನಂತಕುಮಾರ್‌ ಹೆಗಡೆ ಅವರ ಹೇಳಿಕೆಯನ್ನು ನಾನು ಮೂರ್ನಾಲ್ಕು ಬಾರಿ ಕೇಳಿದ್ದೇನೆ ಎಂದರು.
ಡಿಕೆಶಿ ಹೇಳಿಕೆಗೆ ಸಿ.ಟಿ. ರವಿ ತಿರುಗೇಟು: ಬಿಜೆಪಿಯಿಂದ ಆಪರೇಷನ್‌ ಕಮಲ ಹೇಳಿಕೆ ನೀಡಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಸಿ.ಟಿ. ರವಿ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ಸಿಗರು ಅಷ್ಟು ಚೀಪ್ ಎಂದು ಅನ್ನಿಸುವುದಿಲ್ಲ, ವಿಷಯಾಂತರ ಮಾಡಲು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ ಎಂದು ಹೇಳಿದರು.
ರಾಜ್ಯಸಭೆ ಚುನಾವಣೆಯಲ್ಲಿ ಒಬ್ಬರ ಕ್ರಾಸ್ ಓಟ್ ಮಾಡ್ಸಿದ್ರಲ್ಲಾ, ಎಷ್ಟು ಕೊಟ್ಟು ಎಂದು ಕೇಳಬಹುದಲ್ಲ ? ಡಿಕೆಶಿಯವರು ಜನತಾದಳವನ್ನೇ ಖಾಲಿ ಮಾಡುತ್ತೇನೆ ಎಂದು ಹೇಳಿದ್ದರು. ಆ ರೀತಿ ಖಾಲಿ ಮಾಡಿಸೋದಕ್ಕೆ ಯಾವ ಯಾವ ರೀತಿ ಆಮೀಷ ತೋರಿಸಿದ್ದೀರಾ ಎಂದು ಪ್ರಶ್ನಿಸಿದರು.
ಕಾಂಗ್ರೆಸಿಗರಿಗೆ ಸೋಲಿನ ಭೀತಿ ಕಾಡುತ್ತಿದೆ ಅದಕ್ಕೆ ತಿರುಚಿ ಹೇಳಲು ಮುಂದಾಗಿದ್ದಾರೆ. ಅನಂತ್ ಕುಮಾರ್ ಹೆಗಡೆ ಹೇಳಿಕೆಯನ್ನು ಇದೇ ಕಾರಣಕ್ಕೆ ತಿರುಚಿದ್ದಾರೆ. ಸಂವಿಧಾನವನ್ನು ಅಲುಗಾಡಿಸಲು ಬಯಸುವರು ತೂಕಡೇ ಗ್ಯಾಂಗಳು, ರಾಷ್ಟ್ರೀಯತೆ ವಿರುದ್ಧ ಪ್ರಾದೇಶಿಕತೆಯನ್ನು ಎತ್ತಿಕೊಟ್ಟೋದು ಸಂವಿಧಾನಕ್ಕೆ ಮಾಡುವ ಅಪಚಾರ ಎಂದರು.