ಗಡಿನಾಡಲ್ಲಿ ಸ್ವಾತಂತ್ರ್ಯದ ಕಹಳೆ: ಬೈಕ್ ಏರಿದ ನಾರಿಯರು

ಬೈಕ್ ಏರಿದ ನಾರಿಯರು
ನಿಪ್ಪಾಣಿಯಲ್ಲಿ ಶನಿವಾರ ಹರ ಘರ ತಿರಂಗಾ ಅಭಿಯಾನದ ಹಿನ್ನೆಲೆಯಲ್ಲಿ ಬೈಕ್ ರ‍್ಯಾಲಿ ನಡೆಸಲಾಯಿತು.
Advertisement

ನಿಪ್ಪಾಣಿಯಲ್ಲಿ ಶನಿವಾರ ಹರ ಘರ ತಿರಂಗಾ ಅಭಿಯಾನದ ಹಿನ್ನೆಲೆಯಲ್ಲಿ ಬೈಕ್ ರ‍್ಯಾಲಿ ನಡೆಸಲಾಯಿತು.

ನಿಪ್ಪಾಣಿ : ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ನಿಪಾಣಿ ನಗರದಲ್ಲಿ ಶನಿವಾರ ಬೃಹತ್ ತಿರಂಗಾ ಬೈಕ್ ರ‍್ಯಾಲಿ ಆಯೋಜಿಸಲಾಗಿತ್ತು. ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಒಡಿಶಾ ಮೂಲದ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಉಪಾಧ್ಯಕ್ಷೆ ಅರ್ಪಿತಾ ಬಡಾಜೆನಾ ಅವರ ಮುಂದಾಳತ್ವದಲ್ಲಿ ನೂರಾರು ಮಹಿಳೆಯರು ಬೈಕ್ ಓಡಿಸುವುದರ ಮುಖಾಂತರ ಗಮನ ಸೆಳೆದರು.
ಭಾರತೀಯ ಸ್ವಾತಂತ್ರ‍್ಯ ಹೋರಾಟದಲ್ಲಿ ಹುತಾತ್ಮರಾದ ವೀರರ, ಹುತಾತ್ಮರ ಸ್ಮಾರಕ ಸ್ತಂಭಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಗಣ್ಯರು ಪುಷ್ಪಗುಚ್ಛದೊಂದಿಗೆ ನಮನ ಸಲ್ಲಿಸಿದರು. ನಂತರ ಬೆಳಗಾವಿ ನಾಕಾ, ಖರಿ ಕಾರ್ನರ್, ಛತ್ರಪತಿ ಸಂಭಾಜಿ ಮಹಾರಾಜ್ ಚೌಕ್, ಕಿತ್ತೂರ ರಾಣಿ ಚನ್ನಮ್ಮ ಸರ್ಕಲ್, ಕೋಠಿವಾಲೆ ಕಾರ್ನರ್, ಮಹಾತ್ಮ ಬಸವೇಶ್ವರ ಸರ್ಕಲ್, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಚೌಕ್, ಮಹಾದೇವ ಮಂದಿರ, ಗಾಂಧಿ ಚೌಕ್, ಚಾಟೆ ಮಾರ್ಕೆಟ್ ಹೀಗೆ ನಗರದ ಪ್ರಮುಖ ಮಾರ್ಗ ಹಾಗೂ ಚೌಕಗಳಿಂದ ಸಾಗಿ ಛತ್ರಪತಿ ಶಿವಾಜಿ ಮಹಾರಾಜ ಸರ್ಕಲ್‌ನಲ್ಲಿ ಕೊನೆಗೊಂಡಿತು.
ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಅಗಸ್ಟ್ ೧೫ರಂದು ಸ್ವಾತಂತ್ರ‍್ಯ ಮಹೋತ್ಸವದ ೭೫ನೇ ವರ್ಷವಾಗಿದ್ದು ಇದು ಸುವರ್ಣ ಅಕ್ಷರದಲ್ಲಿ ಬರೆದಿಡುವಂತಹ ದಿನ. ಮೊದಲಿನಿಂದಲೂ ಮಹಿಳೆಯರು ಭಾರತೀಯ ಪರಂಪರೆ, ಸಂಸ್ಕೃತಿ ರಕ್ಷಿಸಿ, ಪೋಷಿಸಿ ಬೆಳೆಸುತ್ತ ಬಂದಿದ್ದರ ಪರಿಣಾಮವೇ ಇಂದಿಗೂ ನಮ್ಮ ಭಾರತೀಯ ಸಂಸ್ಕೃತಿ ಉಳಿಸಿಕೊಂಡು ಹೋಗುತ್ತಿದ್ದೇವೆ ಎಂದರು.

ಬೈಕ್ ಏರಿದ ನಾರಿಯರು
ನಿಪ್ಪಾಣಿಯಲ್ಲಿ ಶನಿವಾರ ಹರ ಘರ ತಿರಂಗಾ ಅಭಿಯಾನದ ಹಿನ್ನೆಲೆಯಲ್ಲಿ ಬೈಕ್ ರ‍್ಯಾಲಿ ನಡೆಸಲಾಯಿತು.