ಬಿ.ಎಸ್. ಯಡಿಯೂರಪ್ಪ ತೇಜೋವಧೆ ಸರಿಯಲ್ಲ

Advertisement

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ದಾಖಲಾಗಿರುವ ಪೋಕ್ಸೋ ಪ್ರಕರಣದ ಬಗ್ಗೆ ಮಾತನಾಡುವುದು ಸರಿಯಲ್ಲ. ಪ್ರಕರಣ ದಾಖಲಾದ ತಕ್ಷಣ ದೋಷಿ, ನಿರ್ದೋಷಿ ಎಂದು ಹೇಳುವುದು ಸರಿಯಲ್ಲ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ತಿಳಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಪ್ರಕಾರ ತನಿಖೆ ನಡೆಯುತ್ತಿದೆ. ತನಿಖಾ ವರದಿ ಬರುವ ಮುನ್ನ ವಿನಾಃಕಾರಣ ಯಾರನ್ನೂ ತೇಜೋವಧೆ ಮಾಡುವುದು ಸರಿಯಲ್ಲ ಎಂದರು.
ಕಳೆದ ೧೦ ವರ್ಷದಲ್ಲಿ ಕೇಂದ್ರ ಸರ್ಕಾರದ ಸಾದನೆ ಶೂನ್ಯ. ಹೀಗಾಗಿ ಚುನಾವಣೆ ಸಂದರ್ಭದಲ್ಲಿ ಸಿಎಎ ಜಾರಿಗೊಳಿಸಿ ಜನರ ಗಮನ ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಮೋದಿ ಅವರು ಪ್ರಧಾನಿ ಆಗುವವರೆಗೂ ದೇಶ ಇರಲಿಲ್ಲವೋ ಅಥವಾ ದೇಶದಲ್ಲಿ ಅಭಿವೃದ್ಧಿ ಆಗಿರಲಿಲ್ಲವೋ? ಇದೀಗ ಸ್ವರ್ಗ ಆಗಿದೆಯಾ? ಸುಮ್ಮನೆ ಜನರಿಗೆ ಮಂಕು ಬೂದಿ ಎರಚುತ್ತಿದ್ದಾರೆ. ಬಹುತೇಕರಿಗೆ ಇವರ ನಿಜವಾದ ಬಣ್ಣ ಗೊತ್ತಾಗಿದೆ. ನಾವು ಹೇಳಿದಂತೆ ಮಾಡಿದ್ದೇವೆ. ನೀಡಿದ ಭರವಸೆಗಳನ್ನು ಈಡೇರಿಸಿದ್ದೇವೆ. ಹೀಗಾಗಿ ರಾಜ್ಯದ ೨೦ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾದಿಸಲಿದೆ ಎಂದರು.
ರಾಜ್ಯದಲ್ಲಿ ಕ್ಯಾಂಡಿ ನಿಷೇಧ ಕುರಿತು ಇಗಾಗಲೇ ಮಾಹಿತಿ ಕೊಟ್ಟಿದ್ದೇವೆ. ಕಲರ್ ಬಳಸಬಾರದು ಎಂದು ಹೇಳಲಾಗಿದೆ. ಈ ವಿಚಾರದಲ್ಲಿ ಜನರು ಕೂಡ ಜಾಗೃತರಾಗಬೇಕು. ಒಂದು ವೇಳೆ ನಿಷೇಧಿತ ಬಣ್ಣ ಬಳಿಸಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದರು.