ಏಪ್ರಿಲ್ ೬ ರಿಂದ ಜೂನ್ ೩೦ ರವರೆಗೆ
ಹುಬ್ಬಳ್ಳಿ: ಯಶವಂತಪುರ ಬೈಪಾಸ್ ಮೂಲಕ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ರಾಮೇಶ್ವರಂ ನಿಲ್ದಾಣಗಳ ನಡುವೆ ಸಾಪ್ತಾಹಿಕ ವಿಶೇಷ ರೈಲುಗಳ ಸಂಚಾರ ಪ್ರಾರಂಭಿಸಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ಸಾಪ್ತಾಹಿಕ ವಿಶೇಷ ರೈಲುಗಳ ಮಾಹಿತಿ ವಿವರ
೧ – ರೈಲು ಸಂಖ್ಯೆ ೦೭೩೫೫ ಎಸ್‌ಎಸ್‌ಎಸ್ ಹುಬ್ಬಳ್ಳಿ-ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು ಏಪ್ರಿಲ್ ೬, ೨೦೨೪ ರಿಂದ ಜೂನ್ ೨೯ ರವರೆಗೆ ಪ್ರತಿ ಶನಿವಾರ ಬೆಳಿಗ್ಗೆ ೬:೩೦ ಗಂಟೆಗೆ ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಹೊರಟು ಮರುದಿನ ಬೆಳಿಗ್ಗೆ ೬:೧೫ ಕ್ಕೆ ರಾಮೇಶ್ವರಂ ನಿಲ್ದಾಣವನ್ನು ತಲುಪಲಿದೆ.
೨- ರೈಲು ಸಂಖ್ಯೆ ೦೭೩೫೬ ರಾಮೇಶ್ವರಂ-ಎಸ್‌ಎಸ್‌ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು ಏಪ್ರಿಲ್ ೭, ೨೦೨೪ ರಿಂದ ಜೂನ್ ೩೦ ರವರೆಗೆ ಪ್ರತಿ ಭಾನುವಾರ ರಾತ್ರಿ ೯ ಗಂಟೆಗೆ ರಾಮೇಶ್ವರಂ ನಿಲ್ದಾಣದಿಂದ ಹೊರಟು ಮರುದಿನ ಸಂಜೆ ೦೭:೨೫ ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ.
ಈ ವಿಶೇಷ ರೈಲುಗಳು ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಅರಸೀಕೆರೆ, ತುಮಕೂರು, ಬಾಣಸವಾಡಿ, ಹೊಸೂರು, ಧರ್ಮಪುರಿ, ಸೇಲಂ, ನಮಕ್ಕಲ್, ಕರೂರ್, ತಿರುಚಿರಾಪಳ್ಳಿ, ಪುದುಕ್ಕೊಟ್ಟೈ, ಕಾರೈಕುಡಿ, ಮನಮಧುರೈ ಮತ್ತು ರಾಮನಾಥಪುರಂ ನಿಲ್ದಾಣಗಳಲ್ಲಿ ನಿಲುಗಡೆ ಇರಲಿವೆ.
ಈ ವಿಶೇಷ ರೈಲಿನಲ್ಲಿ ಎಸಿ-೨ ಟೈಯರ್-೧, ಎಸಿ-೩ ಟೈಯರ್-೩, ಸ್ಲೀಪರ್ ಕ್ಲಾಸ್ ಕೋಚ್-೯, ಜನರಲ್ ಸೆಕೆಂಡ್ ಕ್ಲಾಸ್ ಕೋಚ್-೫ ಮತ್ತು ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್ ವ್ಯಾನ್/ಅಂಗವಿಕಲ ಕೋಚ್-೨ ಸೇರಿದಂತೆ ಒಟ್ಟು ೨೦ ಬೋಗಿಗಳಿವೆ.
ಸೂಚನೆ: ರೈಲುಗಳ ಸಂಖ್ಯೆ ೦೭೩೫೫/೦೭೩೫೬ ಎಸ್‌ಎಸ್‌ಎಸ್ ಹುಬ್ಬಳ್ಳಿ-ರಾಮೇಶ್ವರಂ-ಎಸ್‌ಎಸ್‌ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು ಯಶವಂತಪುರ ಬೈಪಾಸ್ ಮೂಲಕ ಸಂಚರಿಸಲಿದೆ ಎಂದು ತಿಳಿಸಲಾಗಿದೆ.
ಹುಬ್ಬಳ್ಳಿ-ಸಂತ್ರಾಗಾಚಿ ನಿಲ್ದಾಣಗಳ ನಡುವೆ ವಿಶೇಷ ರೈಲು ಸಂಚಾರ : ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸಲು ಸಂತ್ರಾಗಾಚಿ-ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ರೈಲು ಸೇವೆಯನ್ನು ಓಡಿಸಲು ಆಗ್ನೇಯ ರೈಲ್ವೆಯು ನಿರ್ಧರಿಸಿದೆ.
ಮಾರ್ಚ್ 27 ರಂದು ರೈಲು ಸಂಖ್ಯೆ 08840 ಸಂತ್ರಾಗಾಚಿ ನಿಲ್ದಾಣದಿಂದ ಸಂಜೆ 6:00 ಗಂಟೆಗೆ ಹೊರಟು, ಮಾರ್ಚ್ 29, 2024 ರಂದು ಬೆಳಿಗ್ಗೆ 8:00 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ.
ಹಿಂದಿರುಗುವ ದಿಕ್ಕಿನಲ್ಲಿ, ಇದೇ ರೈಲು (08841) ಮಾರ್ಚ್ 30, 2024 ರಂದು ಬೆಳಿಗ್ಗೆ 10:30 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು, ಏಪ್ರಿಲ್ 1, 2024 ರಂದು ಮುಂಜಾನೆ 4:20 ಗಂಟೆಗೆ ಸಂತ್ರಗಾಚಿ ನಿಲ್ದಾಣವನ್ನು ತಲುಪಲಿದೆ.
ಈ ವಿಶೇಷ ರೈಲು ಖರಗ್ಪುರ, ಟಾಟಾನಗರ, ಚಕ್ರಧರಪುರ, ರೂರ್ಕೆಲಾ, ಜಾರ್ಸುಗುಡ್, ಬಿಲಾಸ್ಪುರ, ರಾಯಪುರ, ಗೊಂಡಿಯಾ, ಬಲ್ಹಾರ್ಷಾ, ಮದಿಮಂಗಲಂ, ಕಾಜಿಪೇಟೆ, ಸಿಕಂದರಾಬಾದ್, ರಾಯಚೂರು, ಗುಂತಕಲ್, ಬಳ್ಳಾರಿ, ತೋರಣಗಲ್ಲು, ಹೊಸಪೇಟೆ, ಕೊಪ್ಪಳ & ಗದಗ ನಿಲ್ದಾಣಗಳಲ್ಲಿ ನಿಲುಗಡೆ ಇರಲಿವೆ.
ಈ ವಿಶೇಷ ರೈಲಿನಲ್ಲಿ ಸ್ಲೀಪರ್ ಕ್ಲಾಸ್ ಬೋಗಿಗಳು-22 ಮತ್ತು ಎಸ್ಎಲ್ಆರ್.ಡಿ-2 ಸೇರಿದಂತೆ ಒಟ್ಟು 24 ಬೋಗಿಗಳು ಒಳಗೊಂಡಿರುತ್ತವೆ.