ಕಾಮಣ್ಣ ಹೆಸರಲ್ಲಿ ಹೆಚ್ಚುತ್ತಿರುವ ಕಳ್ಳತನ

Advertisement

ಕಾಮಣ್ಣನ ಹುಣ್ಣಿಮೆಗೆ ಸಂಬಂಧಿಸಿದಂತೆ ಉತ್ತರ ಕರ್ನಾಟಕದಲ್ಲಿ ಮಕ್ಕಳಿಂದ ಕಟ್ಟಿಗೆಗಳ ಕಳ್ಳತನ ಸಾಮಾನ್ಯ. ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಕಳ್ಳರು ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಹೋಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.

ಪ್ರತಿ ವರ್ಷ ಈ ಸಂದರ್ಭದಲ್ಲಿ ಕಳ್ಳತನದ ಪ್ರಕರಣಗಳು ಬಾಗಲಕೋಟೆ, ವಿಜಯಪುರ ಹಾಗು ಬೆಳಗಾವಿ ಜಿಲ್ಲೆಗಳಲ್ಲಿ ಸಾಮಾನ್ಯ.

ಇದೀಗ ಕಾಮಣ್ಣನ ಹುಣ್ಣಿಮೆಯಂದು ಕಾಮದಹನ ಹೆಸರಿನಲ್ಲಿ ಪಟ್ಟಣದ ಹೊರವಲಯದಲ್ಲಿರುವ ಕಟ್ಟಿಗೆ ಯಂತ್ರಗಳ ಅಡ್ಡೆ, ಮನೆ ನಿರ್ಮಾಣ ಸೇರಿದಂತೆ ಇತರೆಡೆ ಬೆಲೆಬಾಳುವ ಕಟ್ಟಿಗೆ ಸೇರಿದಂತೆ ಇತರೆ ಸಾಮಗ್ರಿಗಳನ್ನು ಕಳ್ಳತನವಾಗುತ್ತಿರುವದು ಹೆಚ್ಚಾಗಿ ಕಂಡುಬರುತ್ತಿವೆ.

ಬನಹಟ್ಟಿಯ ಕೆಎಚ್‌ಡಿಸಿ ಸಮೀಪ ಕಟ್ಟಿಗೆ ಕೊರೆಯುವ ಅಡ್ಡೆಯಲ್ಲಿ ಗುರುವಾರ ರಾತ್ರಿ ಲಕ್ಷಾಂತರ ರೂ. ಬೆಲೆಬಾಳುವ ಕಟ್ಟಿಗೆ ಹೊತ್ತೊಯ್ದ ಘಟನೆ ನಡೆದಿದೆ.