ಚುನಾವಣೆಗೆ ಸ್ಪರ್ಧಿಸಲು ಅರ್ಥ ಸಚಿವರ ಬಳಿ ದುಡ್ಡಿಲ್ಲ

Advertisement

ನವದೆಹಲಿ: ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದರು. ತಮಿಳುನಾಡು ಅಥವಾ ಆಂಧ್ರಪ್ರದೇಶದಲ್ಲಿ ನಿಲ್ಲುವಂತೆ ಸೂಚಿಸಿದ್ದರು. ಆದರೆ ಅಷ್ಟೊಂದು ದುಡ್ಡು ತಮ್ಮ ಬಳಿ ಇಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ಪಕ್ಷದಿಂದ ಆಹ್ವಾನ ಬಂದ ನಂತರ ಹತ್ತು ದಿನಗಳ ನಂತರ ಕಾಲಾವಕಾಶ ತೆಗೆದುಕೊಂಡು, ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾಗಿ ನಿರ್ಮಲಾ ಹೇಳಿದ್ದಾರೆ. ಟೈಮ್ಸ್ ನೌ ಸಮ್ಮಿಟ್‌ನಲ್ಲಿ ತೂರಿಬಂದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಈ ವಿಷಯ ಬಿಚ್ಚಿಟ್ಟಿದ್ದಾರೆ. `ಹಣದ ಭಾಗ ಒಂದು ಕಡೆಯಾದರೆ, ಗೆಲುವಿನ ಮಾನದಂಡದಲ್ಲಿ ನಾವು ಯಾವ ಜಾತಿ, ಧರ್ಮಕ್ಕೆ ಸೇರಿದ್ದೇವೆ ಎನ್ನುವುದೂ ಒಳಗೊಳ್ಳುತ್ತದೆ. ಹೀಗಾಗಿ ನಿರ್ಧಾರ ತೆಗೆದುಕೊಳ್ಳುವ ಮುಂದೆ ಇವೆಲ್ಲ ಅಂಶಗಳನ್ನು ಪರಿಗಣಿಸಿದ್ದೇನೆ’ ಎಂದಿದ್ದಾರೆ.
ಮೋದಿ ಸಂಪುಟದಲ್ಲಿ ಸಚಿವರಾಗಿರುವ ರಾಜ್ಯಸಭಾ ಸದಸ್ಯರಾದ ಧರ್ಮೇಂದ್ರ ಪ್ರಧಾನ್, ಪಿಯೂಷ್ ಗೋಯೆಲ್, ಭೂಪೇಂದರ್ ಯಾದವ್ ಮೊದಲಾದವರು ಈ ಬಾರಿ ಕಣಕ್ಕೆ ಇಳಿದಿದ್ದಾರೆ. ಮೋದಿ ಅಲೆ ಪ್ರಬಲವಾಗಿದ್ದು, ಈ ಬಾರಿ ಬಿಜೆಪಿ ೩೭೦ ಸ್ಥಾನಗಳನ್ನು ಗೆಲ್ಲುವ ಗುರಿ ಸಾಧಿಸುವುದಾಗಿ ನಿರ್ಮಲಾ ವಿಶ್ವಾಸ ವ್ಯಕ್ತಪಡಿಸಿದರು.