ಬಿಜೆಪಿ ಸೇರದಿದ್ದರೆ ಒಂದು ತಿಂಗಳಲ್ಲೇ ನಮ್ಮ ಬಂಧನ

Advertisement

ನವದೆಹಲಿ: ಬಿಜೆಪಿಗೆ ಸೇರದೆ ಹೋದರೆ ಮುಂಬರುವ ದಿನಗಳಲ್ಲಿ ಜಾರಿ ನಿರ್ದೇಶನಾಲಯ(ಇ.ಡಿ) ನನ್ನನ್ನೂ ಬಂಧಿಸುವ ಸಾಧ್ಯತೆಯಿದೆ ಎಂದು ಎಎಪಿ ಸಚಿವೆ ಅತಿಶಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ನನ್ನ ಮನೆ ಮೇಲೆ ಇಡಿ ದಾಳಿ ನಡೆಯಲಿದೆ, ಅಲ್ಲದೆ ನನ್ನ ಕುಟುಂಬ ಸದಸ್ಯರು ಮತ್ತು ಸಂಬಂಧಿಕರ ಮನೆಗಳ ಮೇಲೆ ಇಡಿ ದಾಳಿ ನಡೆಯಲಿದೆ ಎಂದು ಹೇಳಿದ್ದರು. ನಂತರ ನಮ್ಮೆಲ್ಲರಿಗೂ ಸಮನ್ಸ್ ಕಳುಹಿಸಲಾಗುವುದು ಮತ್ತು ಸಮನ್ಸ್ ನಂತರ ನಮ್ಮನ್ನು ಬಂಧಿಸಲಾಗುವುದು ಎಂದಿದ್ದಾರೆ, ನಾನು ಬಿಜೆಪಿಗೆ ಹೇಳುತ್ತೇನೆ, ನಮಗೆ ಭಯವಿಲ್ಲ. ನಾವೆಲ್ಲ ಕೇಜ್ರಿವಾಲ್ ಸೈನಿಕರು, ಸಂವಿಧಾನವನ್ನು ಉಳಿಸಲು, ಪ್ರಜಾಪ್ರಭುತ್ವವನ್ನು ಉಳಿಸಲು ಮತ್ತು ದೇಶವಾಸಿಗಳಿಗೆ ಉತ್ತಮ ಜೀವನವನ್ನು ನೀಡಲು, ಪ್ರತಿಯೊಬ್ಬ ಎಎಪಿ ನಾಯಕರು, ಶಾಸಕರು ಮತ್ತು ಕಾರ್ಯಕರ್ತರು ತಮ್ಮ ಕೊನೆಯ ಉಸಿರು ಇರುವವರೆಗೂ ಹೋರಾಡುತ್ತಲೇ ಇರುತ್ತಾರೆ, ಮೊದಲ ಸಾಲಿನ ನಾಯಕತ್ವವನ್ನು ಈಗಾಗಲೇ ಬಂಧಿಸಲಾಗಿದೆ ಇದರಲ್ಲಿ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್ ಮತ್ತು ಸತ್ಯೇಂದ್ರ ಜೈನ್ ಈಗಾಗಲೇ ಜೈಲಿನಲ್ಲಿದ್ದಾರೆ. ಈ ನಾಲ್ವರು ನಾಯಕರ ನಂತರ ಈಗ ಇನ್ನೂ ನಾಲ್ವರು ನಾಯಕರನ್ನು ಬಂಧಿಸಲು ಸಿದ್ಧತೆ ನಡೆದಿದೆ ಎಂದಿದ್ದಾರೆ.