ಗುಡುಗು, ಸಿಡಿಲಿನ ಆರ್ಭಟ ಕುರಿಗಾಹಿ ಮರಣ : 17 ಕುರಿಗಳ ಸಾವು

Advertisement

ಯಾದಗಿರಿ: ಜಿಲ್ಲೆಯಾದ್ಯಂತ ಭಾನುವಾರ ರಾತ್ರಿ ಯಿಂದ ಬೆಳಗಿನ ಜಾವದ ವರೆಗೆ ಗುಡುಗು,ಸಿಡಿಲು ಸಹಿತ ಸುರಿದ ಅಕಾಲಿನ ಮಳೆಗೆ ಅಪಾರ ಆಸ್ತಿಪಾಸ್ತಿ ಸೇರಿದಂತೆ ಜೀವಹಾನಿ ಸಂಭವಿಸಿದ್ದು ಪ್ರತ್ಯೇಕ ಎರಡು ಘಟನೆಯಲ್ಲಿ ಒಟ್ಟು ೧೭ ಕುರಿಗಳು ಸಾವನಪ್ಪಿರುವ ಘಟನೆ ವರಿದಿಯಾಗಿದೆ.
ಶಹಾಪುರ ತಾಲೂಕಿನ ವಿಭೂತಿಹಳ್ಳಿ ಗ್ರಾಮದ ಹೊರವಲಯದಲ್ಲಿ ಸಿಡಿಲು ಬಡಿದು ಕುರಿಗಾಹಿ ಸೇರಿದಂತೆ ೭ ಕುರಿಗಳು ಮೃತಪಟ್ಟಿವೆ. ಸಿಡಿಲಿಗೆ ಬಲಿಯಾದ ವ್ಯಕ್ತಿಯನ್ನು ಗೋವಿಂದಪ್ಪ (೨೬)ಎಂದು ಗುರುತಿಸಲಾಗಿದೆ. ಕುರಿಹಟ್ಟಿಯಲ್ಲಿ ಒಟ್ಟು ೨೦೦ ಕುರಿಗಳು ಇದ್ದವು ಎಂದು ಹೇಳಲಾಗಿದ್ದು ಈ ಘಟನೆಯಿಂದ ಕುಟುಂಬಸ್ಥರ ಆಕ್ರಂಧನ ಮುಗಿಲುಮುಟ್ಟಿತ್ತು. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಡಗೇರಾ ತಾಲೂಕಿನ ಐಕೂರ ಗ್ರಾಮಾಂತರದಲ್ಲಿ ಸೊಮವಾರ ಬೆಳಗಿನ ಜಾವ ಸಿಡಿಲು ಬಡಿದು ಸಾಬಣ್ಣ ಮುಂಡರಗಿ ಇವರಿಗೆ ಸೇರಿದ ೧೦ ಕುರಿಗಳು ಸಾವನಪ್ಪಿವೆ. ತಮ್ಮ ಜಮೀನಿನಲ್ಲಿರುವ ಕುರಿಹಟ್ಟಿಯಲ್ಲಿ ಕುರಿಗಳು ಸಾವನಪ್ಪಿವೆ. ಈ ಕುರಿತು ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾದಗಿರಿ ನಗರ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಭಾನುವಾರ ಸುರಿದ ಮಳೆಗೆ ಮುಖ್ಯ ರಸ್ತೆಯ ತಗ್ಗು ಪ್ರದೇಶದಲ್ಲಿ ನೀರು ಸಂಗ್ರಹವಾಗಿ ನಿಂತಿವೆ.ಇದರಿಂದಾಗಿ ಬೆಳಿಗ್ಗೆ ಸುಗಮ ಸಂಚಾರಕ್ಕೆ ಅಡ್ಡಿಯಾಯಿತು. ರಸ್ತೆ ಮೇಲೆ ನಿಂತಿದ್ದ ನೀರು ವಾಹನಗಳು ಸಂಚರಿಸಿದ ರಭಸಕ್ಕೆ ಪಾದಚಾರಿಗಳಿಗೆ ಜಲಾಭಿಷೇಕವಾಯಿತು. ನಗರದಲ್ಲಿರುವ ಲೋಕೋಪಯೋಗಿ ಹಾಗೂ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗ ಕಚೇರಿಯ ಅಂಗಳದಲ್ಲಿ ಯಥೇಚ್ಚವಾಗಿ ನೀರು ಸಂಗ್ರಹವಾಗಿ ನಿಂತಿತ್ತು. ಅವೈಜ್ಷಾನಿಕ ಚರಂಡಿ ವ್ಯವಸ್ಥೆಯಿಂದಾಗಿ ಕಚೇರಿಯ ಅಂಗಳದಲ್ಲಿ ನೀರು ಸಂಗ್ರಹವಾಗಿ ಅಧಿಕಾರಿಗಳು ಮತ್ತು ಸಾರ್ವಜನಿಕರು ಕಚೇರಿಗೆ ತೆರಳಲು ತಿಣಕಾಡಿದರು. ವಿಭಾಗ ಕಚೇರಿಯ ಅಂಗಳದಲ್ಲಿ ಯಥೇಚ್ಚವಾಗಿ ನೀರು ಸಂಗ್ರಹವಾಗಿ ನಿಂತಿತ್ತು. ಅವೈಜ್ಷಾನಿಕ ಚರಂಡಿ ವ್ಯವಸ್ಥೆಯಿಂದಾಗಿ ಕಚೇರಿಯ ಅಂಗಳದಲ್ಲಿ ನೀರು ಸಂಗ್ರಹವಾಗಿ ಅಧಿಕಾರಿಗಳು ಮತ್ತು ಸಾರ್ವಜನಿಕರು ಕಚೇರಿಗೆ ತೆರಳಲು ತಿಣಕಾಡಿದರು.