ಕರಿ ಕುರ್ಚಿ ಮಾಲಿಕ ನೀನಲ್ಲ….

Advertisement

ಸ್ವಲ್ಪದಿನ ಜೈಲಿನಲ್ಲಿದ್ದ ಕ್ರೇಜಿಗೆ ಅದ್ಯಾರೋ ಏನೇನೋ ಹೇಳಿಕೊಟ್ಟುಬಿಟ್ಟವ್ರೆ… ಅದಕ್ಕೆ ಹೊರಗೆ ಬಂದ ಕೂಡಲೇ ಸೋದಿಮಾಮಾ ಅಲ್ಲ ಲಮಿತ್ ಕಾಕಾ ಅಂತ ಉಸಿರುಬಿಡದ ಹಾಗೆ ಹೇಳುತ್ತಿರುವುದನ್ನು ಅವರಿವರು ಕೇಳಿಸಿಕೊಂಡು ನೋಡಿ..ನೋಡಿ ಲಮಿತ್ ಸಾ ಅವರೆ ಕೇಜ್ರಿಗೆ ಒಂದೇ ನಿಮ್ಮ ಭಾವನೆ ಅರ್ಥವಾಗಿದೆ. ಅವನು ನಿಮ್ಮ ಹೆಸರು ಹೇಳುತ್ತಿದ್ದಾನೆ ಎಂದು ಹೇಳಿದ ಕೂಡಲೇ ಒಳಗೆ ಎಲ್ಲೋ ಒಂದು ಕಡೆ ಖುಷಿಯಾದರೂ ಅದನ್ನು ತೋರಿಸಿಕೊಡದೇ… ಏನ್ರೀ ಆ ಮನಿಷಾ…. ಏನ್ರೀ ಆ ಮನಿಷಾ… ಹಗಲು ರಾತ್ರಿ ಕೆಮ್ಮುತ್ತಿದ್ದಾಗ ನಾನೇ ಮಾರ್ಗೆಪ್ಪನ ಕಡೆ ಔಷಧಿ ಕೊಡೆಸಿದೆ. ಅಲ್ಲಲ್ಲಿ ಜಗಳವಾಡಿದಾಗ ನಾನೇ ಹೋಗಿ ಬಿಡಿಸಿಬಂದೆ. ಆ ಅಜ್ಜ ತಮ್ಮ ಗುಜಾರೆ ಸಿಟ್ಟಿಗೆದ್ದಾಗ ನೋಡ್ ತಮ್ಮಾ ಹಂಗಲ್ಲ ಅದೂ ಎಂದು ನಾನೇ ಬುದ್ದಿ ಹೇಳಿದ್ದೆ. ಅದಕ್ಕೆ ನನ್ನ ಹೆಸರು ಹೇಳಿರಬಹುದು ಎಂದು ಗೆಳೆಯರಿಗೆ ಹೇಳಿ ನಕ್ಕು ಒಳಗೆ ಹೋದರು. ಇನ್ನೂ ಒಂದು ಗ್ಯಾಂಗು ಸೀದಾ ಸೋದಿಮಾಮಾನ ಹತ್ತಿರ ಹೋಗಿ…ಘಾತವಾಗುತ್ತದೆ…ಘಾತವಾಗುತ್ತದೆ..ಸ್ವಾಮೀ ಸ್ವಾಮೀ ನೋಡಿದಿರಾ ಎಂದು ಅಂದರು. ಅದಕ್ಕೆ ಅವರು ಗಂಟಲಿನಿಂದ ಅದೇನು ಘಾತ…? ಕ್ಯಾ ಹುವಾ…? ಕ್ಯಾ ಘಾತ್…? ಎಂದು ಕೇಳಿದರು. ಅದಕ್ಕೆ ಸ್ವಾಮೀ ಅಂವ ಕ್ರೇಜಿ ಇದ್ದಾನಲ್ಲ ಹೊದಲ್ಲಿ ಬಂದಲ್ಲಿ, ಕುಳಿತಲ್ಲಿ, ನಿಂತಲ್ಲಿ ಒಂದೇ ಸಮನೆ…..
ನೀನಲ್ಲ ನೀನಲ್ಲ
ಕರಿಕುರ್ಚಿ ಮಾಲಿಕ ನೀನಲ್ಲ
ಎಂದು ವಯ್ಯಾರದಿಂದ ಹಾಡಲು ಶುರುಮಾಡಿದ್ದಾನೆ ಎಂದು ಹೇಳಿದರು. ಅದಕ್ಕೆ ಅವರು…ಹಾಂ…ಹಾಡಲಿ..ಹಾಡಲಿ…ಬೇಕಾದಷ್ಟು ಹಾಡಲಿ..ಕ್ರೇಜಿ ಜೈಲಿನಲ್ಲಿದ್ದಾಗ ನಾನೇ ನಾಟಕ ಮಾಸ್ತರ ಕೊಂಡೆಪ್ಪಣ್ಣನನ್ನು ನೆಪಮಾಡಿ ಕಳುಹಿಸಿ ಈ ಹಾಡನ್ನು ಅವನಿಗೆ ಕಲಿಸಲು ಹೇಳಿದ್ದೆ. ಜನರಿಗೆ ಅವರಾ-ಇವರಾ…ಎಂದು ದೊಡ್ಡ ಕನ್‌ಫ್ಯೂಸ್ ಮಾಡಲು ನಾವೇ ಮಾಡಿದ ಆಟ ಇದು. ಆ ಕ್ರೇಜಿಗೆ ಏನೂ ಗೊತ್ತಾಗಿಲ್ಲ ಅದಕ್ಕೆ ಹೀಗೆಲ್ಲ ಆಡುತ್ತಿದ್ದಾನೆ..ಹಹ್ಹಹ್ಹ…ಹ್ಹಹ್ಹಹ್ಹ…ಎಂದು ಸುಮ್ಮನಾದ…ಇತ್ತ ಕ್ರೇಜಿ ಮಾತ್ರ…ಕರಿಕುರ್ಚಿ ಮಾಲಿಕ ಮಾಮನಲ್ಲ…ಮಾಮನಲ್ಲ…ಮಾಮನಲ್ಲ ಎಂದು ಹಾಡಿಕೊಂಡು ಅಡ್ಡಾಡುತ್ತಿದ್ದಾನೆ.