ಸಿಡಿಲು ಬಡಿದು ಓರ್ವ ಸಾವು, ಇಬ್ಬರು ಗಂಭೀರ

ಸಿಡಿಲು
Advertisement

ಬೆಳಗಾವಿ: ಗುರುವಾರ ಸಂಜೆ ಸುರಿದ ಗುಡುಗು ಸಿಡಿಲಿನಿಂದ ಮಳೆಯಲ್ಲಿ ಸಿಡಿಲು ಬಡಿದು ಓರ್ವ ವ್ಯಕ್ತಿ ಹಾಗೂ ಹಲವು ಕುರಿಗಳು ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ವಾಳ ಗ್ರಾಮದಲ್ಲಿ ನಡೆದಿದ್ದು, ಮಳೆ ಅಬ್ಬರಕ್ಕೆ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನದಿಯಂತೆ ಪರಿವರ್ತನೆ ಯಾಗಿದೆ.
ಗುರುವಾರ ಸಂಜೆ ಹುಕ್ಕೇರಿ ತಾಲೂಕಿನಲ್ಲಿ ಸುರಿದ ಗುಡುಗು ಮಿಂಚಿನ ಮಳೆಯಲ್ಲಿ ಸಿಡಲಿನ ಹೊಡೆತಕ್ಕೆ ಸಿಕ್ಕು ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಅಲ್ಲದೆ ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅದೇ ರೀತಿ ಸಿಡಿಲಿನ ಹೊಡೆತಕ್ಕೆ ಕೆಲವು ಕುರಿಗಳು ಕೂಡಾ ಮೃತಪಟ್ಟಿರುವದು ವರದಿಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಹುಕ್ಕೇರಿ ತಹಶಿಲ್ದಾರರ ರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅದರಂತೆ ಹುಕ್ಕೇರಿ ತಾಲೂಕಿನ ಸೊಲ್ಲಾಪುರ ಗ್ರಾಮದ ಬಳಿಯ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರೆಯಲ್ಲಿ ಮಳೆಯ ನೀರು ಹರಿಯುತ್ತಿರುವದರಿಂದ ರಾಷ್ಟ್ರೀಯ ಹೆದ್ದಾರಿ ನದಿಯಂತೆ ಭಾಸವಾಗಿದೆ. ಇದರಿಂ ಕೆಲಹೊತ್ತು ರಸ್ತೆ ಸಂಚಾರ ಕ್ಕು ಅಡಚಣೆ ಉಂಟಾಗಿದೆ ಎಂದು ತಿಳಿದಿದೆ.