ಮೋದಿ ಮತ್ತೆ ಪ್ರಧಾನಿಯಾಗುವುದಿಲ್ಲ

Advertisement

ವಾರಾಣಸಿ: ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದಿಲ್ಲ. ಇದು ನಾನು ನೀಡುವ ಗ್ಯಾರಂಟಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮೋದಿ ಸ್ಪರ್ಧಿಸಿರುವ ವಾರಾಣಸಿಯಲ್ಲೇ ಹೇಳಿದ್ದಾರೆ. ಮೋದಿ ವಿರುದ್ಧ ಕಾಂಗ್ರೆಸಿನ ಅಜಯ್ ರಾಯ್ ಸ್ಪರ್ಧಿಸಿದ್ದಾರೆ. ಆದರೆ ಇಬ್ಬರ ನಡುವಣ ಪೈಪೋಟಿಯಲ್ಲಿ ರಾಯ್ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಜೂನ್ ೪ರ ಬಳಿಕ ಮೋದಿ ಪ್ರಧಾನಿಯಾಗುವುದಿಲ್ಲ ಎಂದು ನಾನು ಗ್ಯಾರಂಟಿಯೊಂದಿಗೆ ಹೇಳುತ್ತಿದ್ದೇನೆ ಎಂದರು.
ರಾಹುಲ್ ಜೊತೆಗಿದ್ದ ಎಸ್‌ಪಿ ನಾಯಕ ಅಖಿಲೇಶ್ ಸಿಂಗ್ ಯಾದವ್ ಕೂಡ ಭಾಷಣ ಮಾಡಿದರು. ವಾರಾಣಸಿಯಲ್ಲಿ ಲೋಕಸಭಾ ಚುನಾವಣೆಯ ಕೊನೆಯ ಹಂತದಲ್ಲಿ ಜೂನ್ ಒಂದರಂದು ಮತದಾನ ನಡೆಯಲಿದೆ.