ಮಗನ ಸ್ನೇಹಿತರಿಂದಲೇ ಪಾಲಕರಿಗೆ ಥಳಿತ

Advertisement

ಹುಬ್ಬಳ್ಳಿ: ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿರುವ ಸ್ವಂತ ಮಗನನ್ನು ನೋಡಲು ಬಂದ ಪಾಲಕರನ್ನು ಅನಾಮಿಕರು ಸೇರಿಕೊಂಡು ಥಳಿಸಿದ ಘಟನೆ ಕಿಮ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಆವರಣದಲ್ಲಿ ಬುಧವಾರ ನಡೆದಿದೆ.
ಮೊಹಮ್ಮದಸಾಬ್ ಹಾಗೂ ಸಾಹೇರಾಬಾನು ದಂಪತಿಯ ಮಗ ಟಿಪ್ಪು ಸುಲ್ತಾನ್ ನಾಲ್ಕು ವರ್ಷಗಳಿಂದ ತಂದೆ ತಾಯಿಯಿಂದ ದೂರವಾಗಿದ್ದ. ಮನೆಯಲ್ಲಿ ಜಗಳ ಮಾಡಿಕೊಂಡು ತನ್ನ ಸ್ನೇಹಿತನ ಮನೆಯಲ್ಲಿ ವಾಸವಾಗಿದ್ದ. ಮಂಗಳವಾರ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ. ಹೀಗಾಗಿ, ಸ್ನೇಹಿತರು ಸೇರಿಕೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಗನನ್ನು ಆಸ್ಪತ್ರೆಯಲ್ಲಿ ದಾಖಲಿಸಿರುವ ಸುದ್ದಿ ತಿಳಿದ ಪಾಲಕರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಈ ಸಂದರ್ಭದಲ್ಲಿ ಮಗನ ಭೇಟಿಗೆ ಅವಕಾಶ ಕಲ್ಪಿಸದ ಟಿಪ್ಪು ಸ್ನೇಹಿತರು, ಅವನನ್ನು ಮನೆಯಿಂದ ಹೊರಹಾಕಿ ನಾಲ್ಕು ವರ್ಷ ಕಳೆದಿವೆ. ಇಷ್ಟು ವರ್ಷ ಅವನಿಂದ ದೂರವಿದ್ದ ನೀವು ಈಗ ಯಾಕೆ ಬಂದಿದ್ದೀರಿ' ಎಂದು ಪ್ರಶ್ನಿಸಿದ್ದಾರೆ. ಇದರಿಂದ ವಾದ ವಿವಾದದ ಬಳಿಕ ಟಿಪ್ಪು ಸ್ನೇಹಿತರು ಪಾಲಕರನ್ನು ಕಿಮ್ಸ್ ಆವರಣದಲ್ಲಿಯೇ ಮನಸೋ ಇಚ್ಛೆ ಥಳಿಸಿದ್ದಾರೆ. ಅಲ್ಲದೇ, ಟಿಪ್ಪು ಸುಲ್ತಾನ್ ಸ್ನೇಹಿತ ಜಹೀರ್ ಅಬ್ಬಾಸ್ ಅತ್ತಾರ ಹಾಗೂ ತಾಯಿ ರೇಹನಾ ಖಾಜಾ ಅತ್ತಾರ ಅವರುಟಿಪ್ಪುವನ್ನು ನಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದೇವೆ. ಅವನು ನಿಮ್ಮ ಮಗ ಅಲ್ಲ. ನಮ್ಮ ಮಗ ಎಂದು ಅವಾಜ್ ಹಾಕಿ ಕಳಿಸಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.