14 ಕ್ಷೇತ್ರಗಳಲ್ಲಿ ಗೆಲುವು ಖಚಿತ!

Advertisement

ಈ ಬಾರಿ ಮೋದಿ ಅಲೆ ಎಲ್ಲೂ ಇಲ್ಲ! ರಾಜ್ಯದಲ್ಲಿ 14, ದೇಶದಲ್ಲಿ 295 ಸೀಟುಗಳನ್ನು ಇಂಡಿಯಾ ಕೂಟ ಗೆಲ್ಲಲಿದೆ

ಬೆಂಗಳೂರು : ರಾಜ್ಯದಲ್ಲಿ 14, ದೇಶದಲ್ಲಿ 295 ಸೀಟುಗಳನ್ನು ಇಂಡಿಯಾ ಕೂಟ ಗೆಲ್ಲಲಿದೆ ಎಂದು ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಈ ಕುರತಂತೆ ಮಾತನಾಡಿರುವ ಅವರು ಶನಿವಾರ ಪ್ರಕಟಗೊಂಡಿರುವ ಎಕ್ಸಿಟ್ ಪೋಲ್ ನ ಫಲಿತಾಂಶವನ್ನು ನಂಬಲು ಸಾಧ್ಯವಿಲ್ಲ. ನಮ್ಮ ಗ್ಯಾರಂಟಿಗಳು ಎಲ್ಲರನ್ನೂ ವಿಶೇಷವಾಗಿ ಮಹಿಳೆಯರನ್ನು ತಲುಪಿದೆ. ಬೆಂಗಳೂರಿನಲ್ಲಿ 2 ಕ್ಷೇತ್ರಗಳು ಸೇರಿದಂತೆ ರಾಜ್ಯದಲ್ಲಿ ಕನಿಷ್ಠವೆಂದರೂ14, ಗರಿಷ್ಠ 20 ಕ್ಷೇತ್ರಗಳಲ್ಲಿ ನಾವು ಜಯಗಳಿಸುತ್ತೇವೆಂಬ ವಿಶ್ವಾಸವಿದೆ. ಅಂತೆಯೇ ದೇಶದಲ್ಲಿ ನಮ್ಮ ‘ಇಂಡಿಯಾ’ ಕೂಟ 295 ಸೀಟುಗಳನ್ನು ಗೆಲ್ಲಲಿದೆ. ಈ ಬಾರಿ ಮೋದಿ ಅಲೆ ಎಲ್ಲೂ ಇಲ್ಲ! ಎಂದಿದ್ದಾರೆ.