ಶ್ರೀರಾಮ ಸೇನೆ ಹೆಲ್ಪ್ ಲೈನ್‌ಗೆ ಬೆದರಿಕೆ ಕರೆಗಳು

Advertisement

ಧಾರವಾಡ: ಲವ್‌ಜಿಹಾದ್‌ಗೆ ಸಿಲುಕಿರುವ ಯುವತಿಯರ ರಕ್ಷಣೆಗಾಗಿ ಶ್ರೀರಾಮ ಸೇನೆ ಆರಂಭಿಸಿರುವ ಹೆಲ್ಪ್ ಲೈನ್‌ಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಶ್ರೀರಾಮಸೇನೆ ಮುಖಂಡ ಗಂಗಾಧರ ಕುಲಕರ್ಣಿ ತಿಳಿಸಿದ್ದಾರೆ.

ಮೇ ೨೯ರಂದು ಶ್ರೀರಾಮ ಸೇನೆ ಹಿಂದೂ ಮಹಿಳೆಯರ ರಕ್ಷಣೆಗಾಗಿ ಹೆಲ್ಪ್ ಲೈನ್ ಆರಂಭಿಸಿತ್ತು. ಕಳೆದ ನಾಲ್ಕು ದಿನಗಳಲ್ಲಿ ೪೦೦ಕ್ಕೂ ಹೆಚ್ಚು ಯುವತಿಯರು ಕರೆ ಮಾಡಿದ್ದಾರೆ. ಲವ್ ಜಿಹಾದ್ ಕುರಿತು ತಮ್ಮ ಸಂದೇಹಗಳನ್ನು ಪರಿಹರಿಸಿಕೊಂಡಿದ್ದಾರೆ. ತೊಂದರೆಯಲ್ಲಿರುವ ಯುವತಿಯರ ಕರೆಗಳೊಂದಿಗೆ ಹೆಲ್ಪ್ಲೈನ್ ವಿರುದ್ಧವೂ ಕರೆಗಳು ಬರುತ್ತಿವೆ.

ಪ್ರತಿದಿನ ಸುಮಾರು ೪-೫ ಬೆದರಿಕೆ ಕರೆಗಳು ಬರುತ್ತಿದ್ದು, ಈವರೆಗೆ ೧೭ ಕರೆಗಳು ಬಂದಿವೆ. ಈ ಎಲ್ಲ ೧೭ ಕರೆಗಳೂ ಹೆಲ್ಪ್ಲೈನ್ ಆರಂಭಿಸಿದ್ದನ್ನು ವಿರೋಧಿಸಿ ಮಾಡಿದ ಕರೆಗಳಾಗಿವೆ! ಇನ್ನು ಶ್ರೀರಾಮ ಸೇನೆ ಹೆಲ್ಪ್ಲೈನ್‌ಗೆ ೩೭ ಮಹಿಳೆಯರು ಕರೆ ಮಾಡಿದ್ದಾರೆ. ೪೨ ಪ್ರೋತ್ಸಾಹಕ ಕರೆಗಳು, ೫೨ ಲವ್‌ಜಿಹಾದ್ ಸಂತ್ರಸ್ತರ ಕರೆಗಳು ಬದಿವೆ. ಹೊರ ರಾಜ್ಯದಿಂದಲೂ ಹೆಲ್ಪ್ಲೈನ್‌ಗೆ ಅಭಿನಂದನೆ ಕರೆಗಳು ಬರುತ್ತಿವೆ.

ಗುರುತು ಪತ್ತೆಯಾಗಬಾರದೆಂದು ಇಂಟರ್‌ನೆಟ್ ಕಾಲ್ ಮೂಲಕ ಬೆದರಿಕೆ ಕರೆ ಮಾಡಲಾಗುತ್ತಿದೆ. ಹೆಲ್ಪ್ಲೈನ್ ಆರಂಭಿಸಿದ್ದರಿಂದ ಮುಖವಾಡ ಕಳಚುತ್ತಿದೆ. ಹೀಗಾಗಿ ಕೆಲವರು ಬೆದರಿಕೆ ಕರೆಗಳನ್ನು ಮಾಡುತ್ತಿದ್ದಾರೆ. ಜಾಲತಾಣಗಳಲ್ಲಿಯೂ ಹೆಲ್ಪ್ ಲೈನ್ ಬ್ಲಾಕ್ ಮಾಡಲಾಗಿದೆ. ಫೇಸ್ ಬುಕ್, ವಾಟ್ಸಾಪ್‌ಗಳನ್ನು ಬ್ಲಾಕ್ ಮಾಡಿದ್ದಾರೆ. ಬೆದರಿಕೆ ಕರೆಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಅದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಶ್ರೀರಾಮ ಸೇನೆಯ ಸಹಾಯವಾಣಿಗೆ ಸಿಗುತ್ತಿರುವ ಅದ್ಭುತ ಪ್ರತಿಕ್ರಿಯೆಯಿಂದ ವಿರೋಧಿಗಳಿಗೆ ಸಮಸ್ಯೆಯಾಗಿದೆ ಎಂದು ಗಂಗಾಧರ ಕುಲಕರ್ಣಿ