ರೆಪೋ ದರ ಯಥಾಸ್ಥಿತಿ ಮುಂದುವರಿಸಿದ ಆರ್​ಬಿಐ

Advertisement

ಸತತ 8ನೇ ಬಾರಿಗೆ ರೆಪೋ ದರ ಬದಲಾವಣೆ ಇಲ್ಲ

ನವದೆಹಲಿ: ರೆಪೋ ದರವನ್ನು ಯಥಾಸ್ಥಿತಿಯಲ್ಲೇ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.
ಯಥಾಸ್ಥಿತಿಯಲ್ಲೇ ಮುಂದುವರಿಸಲು ನಿರ್ಧರಿಸಿರುವ ಹಿಂದಿನ ಕಾರಣವನ್ನು ಹೇಳಿರುವ ದಾಸ್ ಅವರು ಭಾರತದ ಆರ್ಥಿಕತೆ ಏರುಗತಿಯಲ್ಲೇ ಸಾಗುತ್ತಿದೆ. ದೇಶದ ಆರ್ಥಿಕ ಬೆಳವಣಿಗೆಯು ಉತ್ತಮ ಸ್ಥಿರತೆ ಕಾಯ್ದುಕೊಂಡಿರುವ ಹಿನ್ನೆಲೆಯಲ್ಲಿ, ಶೇ. 4ರಷ್ಟಿರುವ ಹಣದುಬ್ಬರದ ದರವನ್ನು ಯಥಾಸ್ಥಿತಿಯಲ್ಲಿ ಹಾಗೆಯೇ ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗಿದೆ. ಅದೇ ಕಾರಣಕ್ಕಾಗಿ, ರೆಪೋ ದರವನ್ನು ಏರಿಸುವ ಅಥವಾ ಇಳಿಸುವ ನಿರ್ಧಾರಕ್ಕೆ ಬರಲಾಗಿಲ್ಲ ಎಂದು ಹೇಳಿದ್ದಾರೆ.
2023ರ ಫೆಬ್ರವರಿಯಲ್ಲಿ ರೆಪೋದರವನ್ನು ಪರಿಷ್ಕರಿಸಿದ್ದ ಆರ್ ಬಿಐ, ಶೇ. 6.5ಕ್ಕೆ ತಂದು ನಿಲ್ಲಿಸಿತ್ತು. ಆಗಿನಿಂದಲೂ ರೆಪೋ ದರವನ್ನು ಹಾಗೆಯೇ ಮುಂದುವರಿಸಿಕೊಂಡು ಬರಲಾಗಿದೆ.